Saturday, June 6, 2026
Homeಕರಾವಳಿಉಡುಪಿಉಡುಪಿ: ಸಿಇಟಿ ಫಲಿತಾಂಶ: ಅವಳಿ ಸಹೋದರರ ಅಪೂರ್ವ ಸಾಧನೆ

ಉಡುಪಿ: ಸಿಇಟಿ ಫಲಿತಾಂಶ: ಅವಳಿ ಸಹೋದರರ ಅಪೂರ್ವ ಸಾಧನೆ

- Advertisement -
- Advertisement -

ಉಡುಪಿ: ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಮಣಿಪಾಲ್ ನ ಮಾಧವ ಕೃಪ ಇಂಗ್ಲೀಷ್ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವ್ರಜೇಶ್ ಮತ್ತು ವೃಷಣ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. 

ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವಳಿ ಸಹೋದರ ಪೈಕಿ ವ್ರಜೇಶ್ ಹಿರಿಯವರಾಗಿದ್ದು, ವೃಷಣ್ ಕಿರಿಯರಾಗಿದ್ದಾರೆ. ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮುಂದೆ ಡಾಕ್ಟರ್ ಆಗುವ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ.

ವ್ರಜೇಶ್ ದ್ವಿತೀಯ ಪಿಯುಸಿಯಲ್ಲಿ (ಸಿಬಿಎಸ್ ಸಿ)  ಶೇ. 99 ರಷ್ಟು ಅಂಕ ಗಳಿಸಿದರೆ, ವೃಷಣ್  ಶೇ. 98. 4 ರಷ್ಟು ಅಂಕ ಪಡೆದಿದ್ದಾರೆ. ಈ ಅವಳಿ ಸಹೋದರರ ತಂದೆ ವೀಣಾಧರ್ ಶೆಟ್ಟಿ ಹಣಕಾಸು ವಿಷಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ರೇಖಾ ವೀಣಾಧರ್ ಶೆಟ್ಟಿ ಎಂ.ಟೆಕ್ ವ್ಯಾಸಂಗ ಮಾಡಿದ್ದು, ಇದೀಗ ಗೃಹಿಣಿಯಾಗಿದ್ದಾರೆ.

- Advertisement -

Latest News

error: Content is protected !!