Saturday, June 6, 2026
Homeಕರಾವಳಿಮಂಗಳೂರು; ಜಿಲ್ಲಾಧಿಕಾರಿ ಕರೆದ ಶಾಂತಿಸಭೆಗೆ ಸಚಿವರು, ಸಂಸದರು, ಶಾಸಕರು ಗೈರು

ಮಂಗಳೂರು; ಜಿಲ್ಲಾಧಿಕಾರಿ ಕರೆದ ಶಾಂತಿಸಭೆಗೆ ಸಚಿವರು, ಸಂಸದರು, ಶಾಸಕರು ಗೈರು

- Advertisement -
- Advertisement -

ಮಂಗಳೂರು: ಜಿಲ್ಲೆಯಲ್ಲಿ ಕೋಮುಗಲಭೆಗಳ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕರೆದ ಶಾಂತಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಶಾಸಕರಾಗಲೀ ಪಾಲ್ಗೊಳದೇ ಸುಮ್ಮನೆ ನಾಮಕಾವಸ್ಥೆಗೆ ಸಭೆ ನಡೆಸಿದಂತಾಗಿದೆ.

ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಗೆ ವಿವಿಧ ಸಮುದಾಯಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಎಂಟು ಶಾಸಕರು ಸಭೆಯಿಂದ ದೂರ ಉಳಿದರು. ಮುಸ್ಲಿಂ ಸೆಂಟ್ರಲ್ ಕಮಿಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ , ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಇತರ ಪ್ರಮುಖ ಸಂಘಟನೆಗಳಿಂದ ಕೂಡ ಸಭೆಯಿಂದ ದೂರ ಉಳಿದಿದ್ದರು.

ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಉಪಸ್ಥಿತರಿದ್ದರು. ಅಧಿಕಾರಿಗಳಲ್ಲದೆ, ಕೆಲವು ರಾಜಕೀಯ ಪಕ್ಷಗಳ ಮತ್ತು ಭಜನಾ ಮಂದಿರಗಳ ಕೆಲವು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!