Wednesday, June 24, 2026
Homeಕರಾವಳಿಬೆಳ್ತಂಗಡಿ:ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಯುವಕನ ಬಂಧನ

ಬೆಳ್ತಂಗಡಿ:ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಯುವಕನ ಬಂಧನ

- Advertisement -
- Advertisement -

ಬೆಳ್ತಂಗಡಿ; ಪುಂಜಾಲಕಟ್ಟೆ ಪೊಲೀಸರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ್ದಾರೆ.ಮಹಮ್ಮದ್‌ ಸಿರಾಜ್‌ (28) ಬಂಧಿತ ಆರೋಪಿ. ಈತನನ್ನು‌ ಪುಂಜಾಲಕಟ್ಟೆ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಶಾಲಾ ಮೈದಾನದಲ್ಲಿ ಸಂಜೆ ಶಾಲೆ ಬಿಡುವ ಹೊತ್ತು ನಿಂತಿದ್ದ ಶಾಲಾ ಬಸ್‌ನ ಒಳಗಡೆ ಪಾನಮತ್ತನಾಗಿ ಅಕ್ರಮವಾಗಿ ಪ್ರವೇಶಗೈದ ಆರೋಪಿ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ‌ ಪೋಷಕರು ದೂರು ನೀಡಿದ್ದರು.ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!