Monday, June 8, 2026
Homeತಾಜಾ ಸುದ್ದಿಕೊರೊನ ಸಂಕಷ್ಟದ ಮಧ್ಯೆ ಸಿ.ಯಂ ಬಿ.ಯಸ್.ವೈ ಬದಲಾಣೆಗೆ ಕತ್ತಿ ಮಸೆಯುತ್ತಿರಿವ ಬಿಜೆಪಿ ...

ಕೊರೊನ ಸಂಕಷ್ಟದ ಮಧ್ಯೆ ಸಿ.ಯಂ ಬಿ.ಯಸ್.ವೈ ಬದಲಾಣೆಗೆ ಕತ್ತಿ ಮಸೆಯುತ್ತಿರಿವ ಬಿಜೆಪಿ ರೆಬಲ್ಸ್

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನ ಸಂಧರ್ಭದಲ್ಲಿ ತನ್ನ ವಯಸ್ಸನ್ನು ಮೀರಿ ಕೆಲಸ ಮಾಡುತ್ತ , ಸಂಕಷ್ಟದ ಹೊತ್ತಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ ಹೊಸ ಸವಾಲು ಎದುರಾಗಿದೆ.
ಬಿಜೆಪಿ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಸಭೆ ನಡೆಸಲಾಗಿದ್ದು,ಉತ್ತರ ಕರ್ನಾಟಕ ಭಾಗದ ಶಾಸಕರಾದ ಬಸವನಗೌಡ ಪಾಟೀಲ್, ರಾಜುಗೌಡ, ಬಾಲಚಂದ್ರ ಜಾರಕಿಹೊಳಿ, ದತ್ತಾತ್ರೇಯ ಪಾಟೀಲ ಸೇರಿದಂತೆ ಸುಮಾರು 20 ಶಾಸಕರು ಭಾಗಿಯಾಗಿದ್ದಾರೆ.
ಕೆಲವರು ಮಂತ್ರಿಗಿರಿಗೆ ಲಾಬಿ ನಡೆಸಿದ್ದು, ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳು ಆಗಬೇಕು. ಇದ್ಯಾವುದು ಆಗದಿದ್ದರೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕೆಂಬ ಒತ್ತಡ ಕೇಳಿಬಂದಿದೆ ಎನ್ನಲಾಗಿದೆ.
ರಮೇಶ ಕತ್ತಿ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು. ಇಲ್ಲದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಹೇಳಲಾಗಿದೆ..

- Advertisement -

Latest News

error: Content is protected !!