Saturday, June 13, 2026
Homeಮನರಂಜನೆಟಿಕ್​ಟಾಕ್​​ ಬ್ಯಾನ್​ ಮಾಡುವುದು ಬೇಡವೆಂದ ಸ್ಯಾಂಡಲ್​ವುಡ್​ ನಟಿ ಸಂಯುಕ್ತಾ ಹೆಗ್ಡೆ!

ಟಿಕ್​ಟಾಕ್​​ ಬ್ಯಾನ್​ ಮಾಡುವುದು ಬೇಡವೆಂದ ಸ್ಯಾಂಡಲ್​ವುಡ್​ ನಟಿ ಸಂಯುಕ್ತಾ ಹೆಗ್ಡೆ!

- Advertisement -
- Advertisement -

ಬೆಂಗಳೂರು: ಬ್ಯಾನ್ ಟಿಕ್ ಟ್ಯಾಕ್ ಅಭಿಯಾನಕ್ಕೆ ಸ್ಯಾಂಡಲ್ ವುಡ್ ನ ಹಲವರು ಬೆಂಬಲ ಸೂಚಿಸಿದ್ದರು. ಆದರೆ ನಟಿ ಸಂಯುಕ್ತಾ ಹೆಗ್ಡೆ ಟಿಕ್ ಟ್ಯಾಕ್ ಬ್ಯಾನ್ ಕ್ರಮಕ್ಕೆ ವಿರೋಧ ವ್ಯಕ್ತವಹಿಸಿದ್ದಾರೆ.

ಟಿಕ್‍ಟಾಕ್ ಬ್ಯಾನ್ ಮಾಡಿದರೆ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ. ಟಿಕ್‍ಟಾಕ್ ಬ್ಯಾನ್ ಮಾಡಬೇಡಿ ಎಂದಿರುವ ಸಂಯುಕ್ತಾ ಒಂದು ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡುವುದರಿಂದ ಅದರಲ್ಲಿ ಇರುವ ಜನರ ಮನಸ್ಥಿತಿ ಬದಲಾಗುವುದಿಲ್ಲ. ಈ ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡಿದರೆ ಜನ ಅವರ ಭಯಾನಕ ವಿಷಯಗಳನ್ನು ಆಪ್ಲೋಡ್ ಮಾಡಲು ಬೇರೆ ಇನ್ನೊಂದು ಆಯಪ್ ಅನ್ನು ಹುಡುಕಿಕೊಳ್ಳುತ್ತಾರೆ. ಆದರೆ ಟಿಕ್‍ಟಾಕ್‍ ನಿಂದ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಹೆಳಿದ್ದರು.

ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಬರುತ್ತಿದೆ. ಹೀಗಾಗಿ ಟಿಕ್‍ಟಾಕ್ ಆಯಪ್ ಚೀನಾದ ದೇಶದ್ದು ಎಂಬ ಕಾರಣಕ್ಕೆ ಅದನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಈಗ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿವೆ.

- Advertisement -

Latest News

error: Content is protected !!