Saturday, October 17, 2026
Homeಇತರಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನ ಬಂಧನ

- Advertisement -
- Advertisement -

ಮುಂಬೈ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಯುವಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ಕಮ್ರಾನ್ ಅಮೀನ್ ಖಾನ್

ಕಮ್ರಾನ್ ಅಮೀನ್ ಖಾನ್ ಬಂಧಿತ ಯುವಕ. ಮುಂಬೈನ ಚುನಾಬತ್ತಿ ಏರಿಯಾದಲ್ಲಿ ವಾಸವಾಗಿರುವ ಕಮ್ರಾನ್ ಸಾಮಾಜಿಕ ಜಾಲತಾಣ ಮೂಲಕ ಉತ್ತರಪ್ರದೇಶದ ಲಖ್ನೋ ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನಿಸಿದ್ದ.

ಯೋಗಿ ಆದಿತ್ಯನಾಥ್ ಗೆ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ತನಿಖೆ ನಡೆಸಿದ್ದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಯುವಕನನ್ನು ಬಂಧಿಸಿದ್ದಾರೆ. ಕಮ್ರಾನ್ ನನ್ನು ಉತ್ತರಪ್ರದೇಶ ಎಸ್.ಟಿ.ಎಫ್. ವಶಕ್ಕೆ ವಹಿಸಲಾಗಿದೆ.

- Advertisement -

Latest News

error: Content is protected !!