Saturday, June 6, 2026
Homeಇತರತಂದೆಗಾಗಿ 1200 ಕಿ.ಮೀ. ಸೈಕಲ್ ತುಳಿದ 15ರ ಬಾಲೆ

ತಂದೆಗಾಗಿ 1200 ಕಿ.ಮೀ. ಸೈಕಲ್ ತುಳಿದ 15ರ ಬಾಲೆ

- Advertisement -
- Advertisement -

ನವದೆಹಲಿ: 15 ವರ್ಷದ ಬಾಲಕಿಯೊಬ್ಬಳು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ. ಬರೋಬ್ಬರಿ 1200 ಕಿಲೋಮೀಟರ್ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿದ್ದಾಳೆ. ಸುಮಾರು ಒಂದು ವಾರಗಳ ಕಾಲ ಬಾಲಕಿ ಸೈಕಲ್ ತುಳಿದಿದ್ದಾಳೆ.

ಹುಡುಗಿ ಹೆಸರು ಜ್ಯೋತಿ ಕುಮಾರಿ. ತಂದೆ ಮೋಹನ್ ಪಾಸ್ವಾನ್. ತಂದೆ ಗಾಯಗೊಂಡ ಕಾರಣ ಜ್ಯೋತಿ ಸೈಕಲ್ ಓಡಿಸಿದ್ದಾಳೆ. ಸೈಕಲ್ ಓಡಿಸುವಾಗ ಯಾವುದೇ ವಾಹನ ಹಿಂದಿನಿಂದ ಬಂದು ಗುದ್ದದಿರಲಿ ಎಂದು ಜ್ಯೋತಿ ಭಯಗೊಳ್ಳುತ್ತಿದ್ದಳಂತೆ. ನೂರಾರು ವಲಸಿಗರು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದರು. ಹಾಗಾಗಿ ರಾತ್ರಿ ಸೈಕಲ್ ಹೊಡೆಯಲು ಭಯವಾಗ್ತಿರಲಿಲ್ಲವೆಂದು ಜ್ಯೋತಿ ಹೇಳಿದ್ದಾಳೆ.

ತಂದೆ ಮತ್ತು ಮಗಳು ಗುರುಗ್ರಾಮ್‌ನಿಂದ ಮೇ 10 ರಂದು ಪ್ರಯಾಣವನ್ನು ಪ್ರಾರಂಭಿಸಿದರು. ಮೇ 16 ರಂದು ಅವರು ತಮ್ಮ ಗ್ರಾಮವನ್ನು ತಲುಪಿದರು. ಪ್ರಯಾಣಕ್ಕಾಗಿ ಅವರು 500 ರೂಪಾಯಿಗೆ ಬೈಸಿಕಲ್ ಖರೀದಿಸಿದ್ದರು.

- Advertisement -

Latest News

error: Content is protected !!