Friday, May 3, 2024
Homeಕರಾವಳಿಅರಂತೋಡು: ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಹಾಗು ಕೋವಿಡ್ 19ರ ನಿರ್ಮೂಲನೆಗೆ ವಿಶೇಷ...

ಅರಂತೋಡು: ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಹಾಗು ಕೋವಿಡ್ 19ರ ನಿರ್ಮೂಲನೆಗೆ ವಿಶೇಷ ಪ್ರಾರ್ಥನೆ

spot_img
- Advertisement -
- Advertisement -

ಅರಂತೋಡು: ತಾಲೂಕಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ )ಅರಂತೋಡು ಇದರ ವತಿಯಿಂದ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ನಡೆಸುವ ಸೌಹಾರ್ದ ಇಫ್ತಾರ್ ಕೂಟ 15ನೇ ವರ್ಷ ಪೂರೈಸಿದ್ದು, ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಾಳೆ (ಮೇ 21) ಸಂಜೆ 4:30ಕ್ಕೆ ಏರ್ಪಡಿಸಲಾಗಿದೆ.

ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಸಾರ್ವಜನಿಕ ಸಭೆಯನ್ನು ನಡೆಸದೆ, ವಿಶ್ವದಾದ್ಯಂತ ಹಬ್ಬಿದ ಕೋವಿಡ್ 19 ಮಹಾಮಾರಿಯ ನಿರ್ಮೂಲನೆಗೆ ವಿಶೇಷ ಪ್ರಾರ್ಥನೆಯನ್ನು ನಡೆಸಿ ಇಫ್ತಾರ್ ಕಿಟ್ ಅನ್ನು ಅರ್ಹ ಫಲಾನುಭವಿಗಳ ಮನೆಗಳಿಗೆ ತಲುಪಿಸಲಾಗುವುದು ಎಂದು ಪ್ರತಿಷ್ಠಾನ ನಿರ್ಧರಿಸಿದೆ.

ವಿಶೇಷ ಪ್ರಾರ್ಥನೆಯನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬ್ ರಾದ ಅಲ್ ಹಾಜ್ ಇಸಾಕ್ ಬಾಖವಿ ನೆರವೇರಿಸಲಿದ್ದು, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಕೋಶಾಧಿಕಾರಿ ಟಿ. ಎಂ. ಜಾವೇದ್ ತೆಕ್ಕಿಲ್ ಮೊದಲಾದವರು ಉಪಸ್ಥಿತರಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿರುತ್ತಾರೆ.

- Advertisement -
spot_img

Latest News

error: Content is protected !!