Tuesday, June 16, 2026
Homeಚಿಕ್ಕಮಗಳೂರುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ತೀವ್ರ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ತೀವ್ರ ವಾಗ್ದಾಳಿ

- Advertisement -
- Advertisement -

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಚಿಕ್ಕಮಗಳೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದರು. 

ಅವರು ಚಿಕ್ಕಮಗಳೂರಿನಲ್ಲಿ ಮಾತನಾಡಿ, ಸುಳ್ಳಿನಲ್ಲಿ ಸಿದ್ಧರಾಮಯ್ಯ ಅವರಂತಹ ನಿಷ್ಠಾವಂತರು ಯಾರು ಇಲ್ಲ. ಸುಳ್ಳು ಹಾಗೂ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ಯಾವಾಗಲೂ ಸತ್ಯಕ್ಕೆ ದೂರವಿರುವ ವಿಚಾರದ ಕುರಿತೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಸುಳ್ಳೇ ಕೆಲವರ ಮನೆ ದೇವರು ಎಂದು ವಂಗ್ಯಮಾಡಿದರು. ಇನ್ನೂ ದಿನನಿತ್ಯವೂ ಸುಳ್ಳುಗಳನ್ನು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ನೀವು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಎಲ್ಲಾದರೂ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ಮಾಡಿದ್ರಾ ಎಂದು ಪ್ರಶ್ನಿಸಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ರಾಜ್ಯಕ್ಕೆ ಆಗಮಿಸಿರುವ ಕುರಿತು ಬೇರೆ ರೀತಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಮೋದಿ ಜೀ ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆಯ ಕುರಿತು ಒಮ್ಮೆ ಅವಲೋಕಿಸಿ ಮಾತನಾಡಲಿ ಎಂದರು.

ಸಿದ್ಧರಾಮಯ್ಯ ಅವರು ಕೊರೋನ ಎರಡು ಡೋಸ್ ಲಸಿಕೆಗಳನ್ನು ದೇಹಕ್ಕೆ ಹಾಕಿಸಿಕೊಳ್ಳದಿದ್ದರೆ ಏನಾಗುತ್ತಿತ್ತು ಎಂದು ಅವರೊಮ್ಮೆ ಊಹಿಸಿಕೊಳ್ಳಲಿ ಎಂದರು. ಸಿದ್ದರಾಮಯ್ಯ ಅವರಿಗೆ ಕೊಂಕು ಮಾತನಾಡುವುದು ಒಂದು ಖಾಯಿಲೆಯಾಗಿದೆ. ಸುಳ್ಳು ಹೇಳುವುದು ಕೂಡಾ ಒಂದು ಖಾಯಿಲೆ. ಇನ್ನೂ ಸುಳ್ಳಿಗೆ ಪ್ರಶಸ್ತಿ ಇದಿದ್ದರೆ ಅದು ಸಿದ್ದರಾಮಯ್ಯ ಅವರಿಗೆ ಸಿಗುತ್ತಿತ್ತು ಎಂದು ಶಾಸಕ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

- Advertisement -

Latest News

error: Content is protected !!