Sunday, June 14, 2026
Homeತಾಜಾ ಸುದ್ದಿ2000 ರೂ. ಕೊಟ್ಟು ರಸ್ತೆ ಬದಿಯಲ್ಲಿ ಒಂದು ಕಪ್ ಚಹಾ ಕುಡಿದ ಡಿಸಿಎಂ!

2000 ರೂ. ಕೊಟ್ಟು ರಸ್ತೆ ಬದಿಯಲ್ಲಿ ಒಂದು ಕಪ್ ಚಹಾ ಕುಡಿದ ಡಿಸಿಎಂ!

- Advertisement -
- Advertisement -

ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ 2000 ರೂಪಾಯಿ ಕೊಟ್ಟು ರಸ್ತೆ ಬದಿಯ ಅಂಗಡಿಯಲ್ಲಿ ಒಂದು ಕಪ್ ಚಹಾ ಕುಡಿದಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆಯಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿರುವ ನಾಗೇನಹಳ್ಳಿಯಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಚಹಾ ಸೇವಿಸಿದ ಪರಮೇಶ್ವರ್, ಚಹಾ ಅಂಗಡಿ ಮಾಲೀಕ ಹಣ ಪಡೆಯಲು ನಿರಾಕರಿಸಿದರೂ 2000 ರೂಪಾಯಿ ಕೊಟ್ಟಿದ್ದಾರೆ.

ಭಾನುವಾರ ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಡಿಸಿಎಂ ಆಗಿದ್ದಕ್ಕೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪರಮೇಶ್ವರ್ ಪಾಲ್ಗೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಇಂಜೆಕ್ಷನ್ ಹಾಕಿಸಿಕೊಂಡು ಕೈಯಲ್ಲಿ ಸಿರೀಂಜ್ ಚುಚ್ಚಿಕೊಂಡೇ ಕಾರ್ಯಕ್ರಮದಲ್ಲಿ ಡಾ. ಪರಮೇಶ್ವರ್ ಭಾಗಿಯಾಗಿದ್ದರು‌.

ಡಿಸಿಎಂ ಆಗಿ ಸ್ವಕ್ಷೇತ್ರ ಕೊರಟಗೆರೆಗೆ ಆಗಮಿಸಿದ ಹಿನ್ನೆಲೆಯಲ್ಲಿ ನಂದಿನಿ ಪೇಡದ ಹಾರ ಸೇರಿದಂತೆ ವಿವಿಧ ಬೃಹತ್ ಹಾರಗಳಿಂದ ಅಭಿಮಾನಿಗಳು ಸ್ವಾಗತ ಕೋರಿದ್ದರು.

- Advertisement -

Latest News

error: Content is protected !!