Tuesday, June 16, 2026
Homeಕರಾವಳಿಮಂಗಳೂರುಮಂಗಳೂರು : ಬಂಡಸಾಲೆಯಲ್ಲಿ ನಿರ್ಮಾಣವಾಗಿದೆ ಬಸ್ ರೂಪದಲ್ಲಿರುವ ಬಸ್ ನಿಲ್ದಾಣ!

ಮಂಗಳೂರು : ಬಂಡಸಾಲೆಯಲ್ಲಿ ನಿರ್ಮಾಣವಾಗಿದೆ ಬಸ್ ರೂಪದಲ್ಲಿರುವ ಬಸ್ ನಿಲ್ದಾಣ!

- Advertisement -
- Advertisement -

ಮಂಗಳೂರು: ಪಾಳು ಬಿದ್ದಿದ್ದ ಬಸ್ ನಿಲ್ದಾಣವನ್ನು ಯುವಕರ ತಂಡವೊಂದು ಹೊಸ ವಿನ್ಯಾಸದ ರೂಪದಲ್ಲಿ ಮರು ನಿರ್ಮಾಣ ಮಾಡಿದೆ.‌ ಮಂಗಳೂರು ನಗರದ ಹೊರವಲಯದ ಗುರುಪುರ ಸಮೀಪದ ಬಂಡಸಾಲೆ ಎಂಬಲ್ಲಿ ಬಸ್ ನ ಸ್ವರೂಪದಲ್ಲೇ ಬಸ್ ನಿಲ್ದಾಣವೊಂದನ್ನು ನಿರ್ಮಾಣ ಮಾಡಲಾಗಿದೆ.

ಈ ಹಿಂದೆ ಬಂಡಸಾಲೆಯಲ್ಲಿದ್ದ ಬಸ್ ನಿಲ್ದಾಣ ಪಾಳು ಬಿದ್ದಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಬಸ್ ಗಾಗಿ ಕಾಯುವುದಕ್ಕೆ ಸೂಕ್ತ ಸ್ಥಳ ಇಲ್ಲದೇ ಕಷ್ಟಪಡುವಂತಾಗಿತ್ತು.ಹೀಗಾಗಿ ಬಂಡಸಾಲೆಯ ವಿ 2 ಗೈಸ್ ಎಂಬ ಯುವಕರ ತಂಡ ವಿಭಿನ್ನವಾಗಿ ಆಲೋಚನೆ ಮಾಡಿ ಈ ಹೊಸ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದಾರೆ.

ನೋಡಲು ಬಸ್ ರೀತಿಯೇ ಕಾಣುವ ಈ ಬಸ್ ನಿಲ್ದಾಣದ ಒಳಗೆ ಕುಡಿಯುವ ನೀರು, ಗ್ರಂಥಾಲಯ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಕೂಡಾ ಇದೆ. ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಸ್ ನಿಲ್ದಾಣ ಈಗ ಆಕರ್ಷಕವಾಗಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

- Advertisement -

Latest News

error: Content is protected !!