Sunday, May 12, 2024
Homeತಾಜಾ ಸುದ್ದಿಕಣಿಯೂರು: ನೇಜಿಕಾರು ಒಕ್ಕೂಟ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯಿಂದ ಪರಿಸರ ಸಂರಕ್ಷಣಾ ಕಾರ್ಯಕ್ರಮ

ಕಣಿಯೂರು: ನೇಜಿಕಾರು ಒಕ್ಕೂಟ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯಿಂದ ಪರಿಸರ ಸಂರಕ್ಷಣಾ ಕಾರ್ಯಕ್ರಮ

spot_img
- Advertisement -
- Advertisement -

ಕಣಿಯೂರು, ಜೂನ್ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ನೇಜಿಕಾರು ಒಕ್ಕೂಟ ಹಾಗೂ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಕಣಿಯೂರು ಘಟಕದ ವತಿಯಿಂದ ಪರಿಸರ ಸಂರಕ್ಷಣೆ ಮಾಹಿತಿ ಹಾಗೂ ಗಿಡ ವಿತರಣೆ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೆಂಗಳದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಹ್ಮದ್ ಕುಂಜಿ ಇವರು ವಹಿಸಿದ್ದರು. ಶಾಲಾ ಮುಖ್ಯ್ಯೊಪಾಧ್ಯಾಯರಾದ ನೇತ್ರಾವತಿಯವರು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ನೆಜಿಕಾರು ಒಕ್ಕೂಟದ ಅಧ್ಯಕ್ಷರಾದ ನಾಣ್ಯಪ್ಪ ಪೂಜಾರಿ, ವಲಯದ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ, ಸೇವಾಪ್ರತಿನಿಧಿ ಶ್ರೀಮತಿ ಜಾನಕಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್, ಕಣಿಯೂರು ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ಶ್ರೀಮತಿ ಚಂದ್ರಕಲಾ ಉಪಸ್ಥಿತರಿದ್ದರು.

ಪರಿಸರ ಮಾಹಿತಿ ಹಾಗೂ ಗಿಡ ವಿತರಣೆ ಕಾರ್ಯಕ್ರಮದಲ್ಲಿ ನೇಜಿಕಾರು ಒಕ್ಕೂಟದ ಸದಸ್ಯರು ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯರು ಭಾಗವಹಿಸಿದರು. ಶಾಲಾ ಆಟದ ಮೈದಾನದ ಸುತ್ತ ಗಿಡ ನಾಟಿ ಮಾಡಲಾಯಿತು ಹಾಗೂ ಒಕ್ಕೂಟದ ಸದಸ್ಯರಿಗೆ ಗಿಡ ವಿತರಣೆ ಮಾಡಲಾಯಿತು.ನೆಜಿಕಾರು ಒಕ್ಕೂಟ ದ ಅಧ್ಯಕ್ಷರು ಸ್ವಾಗತಿಸಿ, ಒಕ್ಕೂಟದ ಉಪಾಧ್ಯಕ್ಷರಾದ ಲೋಕನಾತ್ ವಂದಿಸಿದರು.

ಇನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆಯನ್ನು ಸರಕಾರಿ ಪ್ರಾಥಮಿಕ ಶಾಲೆ ಬನ್ನೆಂಗಳದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ರವರು ಭಾಗವಹಿಸಿ ವಿಪತ್ತು ನಿರ್ವಹಣೆ ಘಟಕದ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಇನ್ನೂ ಸೇವಾಕಾರ್ಯವನ್ನು ನಡೆಸುವಂತೆ ಪ್ರೇರಣೆ ನೀಡಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮರವರು ಜೂನ್ 23ಕ್ಕೆ ನಡೆಯಲಿರುವ ದಶಲಕ್ಷ ಗಿಡನಾಟಿ ಕಾರ್ಯಕ್ರಮಕ್ಕೆ ಎಲ್ಲಾ ಸದಸ್ಯರು ಭಾಗವಹಿಸುವಂತೆ ತಿಳಿಸಿದರು. ಘಟಕಕ್ಕೆ ಹೊಸ ಸ್ವಯಂ ಸೇವಕರ ನೋಂದಣಿ ಮಾಡಲಾಯಿತು.

- Advertisement -
spot_img

Latest News

error: Content is protected !!