Saturday, June 6, 2026
Homeಕರಾವಳಿಉಡುಪಿಕುಂದಾಪುರ: ಅಲೋಪತಿ ಔಷಧಿ ನೀಡುತ್ತಿರುವ ಆಯುರ್ವೇದ ವೈದ್ಯರು: 11 ಮಂದಿಯ ಕ್ಲಿನಿಕ್ ವಿರುದ್ಧ ದೂರು ದಾಖಲು

ಕುಂದಾಪುರ: ಅಲೋಪತಿ ಔಷಧಿ ನೀಡುತ್ತಿರುವ ಆಯುರ್ವೇದ ವೈದ್ಯರು: 11 ಮಂದಿಯ ಕ್ಲಿನಿಕ್ ವಿರುದ್ಧ ದೂರು ದಾಖಲು

- Advertisement -
- Advertisement -

ಕುಂದಾಪುರ: ಆಯುರ್ವೇದ ವೈದ್ಯಕೀಯ ಚಿಕಿತ್ಸೆ ನೀಡಬೇಕಾದ ವೈದ್ಯರು ಅಲೋಪತಿ ಔಷಧ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ 11 ಮಂದಿ ವೈದ್ಯರ ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಲಾಗಿದೆ.

ಕುಂದಾಪುರದ ಸಾಮಾಜಿಕ ಕಾರ್ಯಕರ್ತ ಕಿರಣ್ ಪೂಜಾರಿ ನೀಡಿದ ದೂರಿನನ್ವಯ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಅವರು ತನಿಖೆಗೆ ಆದೇಶಿಸಿದ್ದಾರೆ.

ಅದರಂತೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 11 ಮಂದಿಯ ಕ್ಲಿನಿಕ್ ವಿರುದ್ಧ ದೂರು ದಾಖಲಾಗಿದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದರು. ಇದಾದ ಬಳಿಕ ತಾಲೂಕು ಪ್ರಾಧಿಕೃತ ಅಧಿಕಾರಿಗಳ ನೇತೃತ್ವದ ತಂಡ 11 ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಿದೆ. ಈ ಪೈಕಿ 7 ಕ್ಲಿನಿಕ್‌ಗಳ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.

- Advertisement -

Latest News

error: Content is protected !!