Monday, May 13, 2024
Homeತಾಜಾ ಸುದ್ದಿಉದ್ಘಾಟನೆ ವೇಳೆಯೇ ಕುಸಿದುಬಿದ್ದ ತೂಗು ಸೇತುವೆ: ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು

ಉದ್ಘಾಟನೆ ವೇಳೆಯೇ ಕುಸಿದುಬಿದ್ದ ತೂಗು ಸೇತುವೆ: ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು

spot_img
- Advertisement -
- Advertisement -

ಮೆಕ್ಸಿಕೋ : ಆಗಷ್ಟೇ ನಿರ್ಮಾಣಗೊಂಡಿದ್ದ ತೂಗು ಸೇತುವೆಯೊಂದು ಉದ್ಘಾಟನೆ ನಡೆಸಿದ ವೇಳೆ ಕುಸಿದು ಬಿದ್ದಿದೆ. ಪರಿಣಾಮ ಸೇತುವೆಯ ಉದ್ಘಾಟನೆಗೆ ಬಂದಿದ್ದ ನಗರ ಪಾಲಿಕೆ ಮೇಯರ್, ಉಪಮೇಯರ್, ಹಾಗೂ ಪಾಲಿಕೆ ಸದಸ್ಯರು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಚರಂಡಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಸೇತುವೆ ಕುಸಿತಗೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದಹಾಗೆ ಘಟನೆ ನಡೆದಿರುವುದು ಮೆಕ್ಸಿಕೋದ ಕ್ಯುರ್ನಾವಾಕಾ ನಗರದಲ್ಲಿ. ಈ ಹಿಂದೆ ಇದ್ದ ಸೇತುವೆ ಶಿಥಿಲಗೊಂಡಿದ್ದರಿಂದ ಅದನ್ನು ಕೆಡವಿ ಹೊಸ ತೂಗುಸೇತುವೆ ನಿರ್ಮಾಣ ಮಾಡಲಾಗಿದೆ. ಮರದ ಹಲಗೆ ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ನೂತನ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ.

ನಗರ ಪಾಲಿಕೆಯ ಮೇಯರ್ ಇದರ ಉದ್ಘಾಟನೆಯನ್ನು ಮಾಡಿ ತೂಗು ಸೇತುವೆಯಲ್ಲಿ ನಡೆದಿದ್ದಾರೆ. ಈ ವೇಳೆ ಅವರ ಜೊತೆ ಇದ್ದ ಪಾಲಿಕೆಯ ಉಪ ಮೇಯರ್, ಪಾಲಿಕೆ ಸದಸ್ಯರು, ಪತ್ರಕರ್ತರು ಜೊತೆಗೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ಇಪ್ಪತ್ತಕ್ಕೂ ಹೆಚ್ಚು ಮಂದಿ ತೂಗು ಸೇತುವೆಯ ಮೇಲೆ ನಡೆದಿದ್ದಾರೆ.  ಅಷ್ಟೋತ್ತಿಗಾಗಲೇ ತೂಗು ಸೇತುವೆ ಇಷ್ಟು ಮಂದಿಯ ಭಾರ ತಡೆಯಲಾರದೆ ಕುಸಿದು ಬಿದ್ದಿದೆ. ಹಲವರು ಬಿದ್ದು ಗಾಯಗೊಂಡಿದ್ದಾರೆ.

- Advertisement -
spot_img

Latest News

error: Content is protected !!