Sunday, June 7, 2026
HomeUncategorizedಬೆಳ್ತಂಗಡಿಯಲ್ಲಿ ಕಾಡಿನಿಂದ ಬಂದು ಬಾವಿಗೆ ಬಿದ್ದ ಚಿರತೆ

ಬೆಳ್ತಂಗಡಿಯಲ್ಲಿ ಕಾಡಿನಿಂದ ಬಂದು ಬಾವಿಗೆ ಬಿದ್ದ ಚಿರತೆ

- Advertisement -
- Advertisement -

ಬೆಳ್ತಂಗಡಿ: ಚಿರತೆಯೊಂದು ಕಾಡಿನಿಂದ ನಾಡಿಗೆ ಬಂದು ಬಾವಿಗೆ‌ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದಲ್ಲಿ ಘಟನೆ ನಡೆದಿದೆ.

ನಾವರ ಗ್ರಾಮದ ಜಾಲ ನಿವಾಸಿಯಾಗಿರುವ ವಸಂತ ಪೂಜಾರಿ ಎಂಬವರ ಮನೆಯ‌ ಬಾವಿಗೆ ಚಿರತೆ ಬಿದ್ದಿದೆ. ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೇ ಚಿರತೆ ಬಾವಿಯೊಳಗೇ ಬಾಕಿಯಾಗಿದ್ದು, ಚಿರತೆಯನ್ನು ಬಾವಿಯಿಂದ ಮೇಲೆತ್ತಲು ಸ್ಥಳೀಯರು ಪ್ರಯತ್ನ ನಡೆಸಿದ್ದಾರೆ. ‌

ಆದರೆ ಇನ್ನೂ‌ ಕೂಡಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಹೇಳಲಾಗಿದೆ.

- Advertisement -

Latest News

error: Content is protected !!