Wednesday, June 24, 2026
HomeUncategorizedವಿಶ್ವ ಸೈಕಲ್ ದಿನಾಚರಣೆ ಹಿನ್ನೆಲೆ: ನಾಳೆ ಉಳ್ಳಾಲದ ರಾಣಿ ಅಬ್ಬಕ್ಕ ಕೋಟೆಯಿಂದ ಸೈಕಲ್ ರ್ಯಾಲಿ

ವಿಶ್ವ ಸೈಕಲ್ ದಿನಾಚರಣೆ ಹಿನ್ನೆಲೆ: ನಾಳೆ ಉಳ್ಳಾಲದ ರಾಣಿ ಅಬ್ಬಕ್ಕ ಕೋಟೆಯಿಂದ ಸೈಕಲ್ ರ್ಯಾಲಿ

- Advertisement -
- Advertisement -

ಬೆಂಗಳೂರು: ನಾಳೆ ವಿಶ್ವ ಸೈಕಲ್ ದಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಳು ಐತಿಹಾಸಿಕ ಸ್ಥಳಗಳಲ್ಲಿ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ.

ವಿಧಾನಸೌಧದಲ್ಲಿ ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ. ನಾರಾಯಣ ಗೌಡ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಜಾದಿ‌ಕಾ ಅಮೃತ ಮಹೋತ್ಸವದ ಅಂಗವಾಗಿ ಸೈಕಲ್ ದಿನ ಆಯೋಜನೆ ಮಾಡಲಾಗಿದೆ.

ಕರ್ನಾಟಕದಲ್ಲಿ ಏಳು ಐತಿಹಾಸಿಕ ಸ್ಥಳಗಳಲ್ಲಿ ಬೈಸಿಕಲ್ ರ್ಯಾಲಿ ಆಯೋಜಿಸಲಾಗಿದ್ದು, ಉಳ್ಳಾಲದ ರಾಣಿ ಅಬ್ಬಕ್ಕ ಕೋಟೆಯಲ್ಲಿ ಕೂಡಾ ಸೈಕಲ್ ರ್ಯಾಲಿ ನಡೆಯಲಿದೆ.

ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಸಹಭಾಗಿತ್ವದಲ್ಲಿ ರ್ಯಾಲಿ ನಡೆಯಲಿದ್ದು, ಗೋ ನೇಟಿವ್ ಸಂಸ್ಥೆ ರ್ಯಾಲಿಯನ್ನು ಪ್ರಾಯೋಜಿಸುತ್ತಿದೆ.

- Advertisement -

Latest News

error: Content is protected !!