Sunday, June 7, 2026
Homeತಾಜಾ ಸುದ್ದಿಮಹಿಳೆಯೊಂದಿಗೆ ಜಾಲಿ ಮಾಡಲು ಲಾಡ್ಜ್ ಗೆ ಬಂದ ಅಜ್ಜ: ಏಕಾಂತದಲ್ಲಿದ್ದಾಗಲೇ ವೃದ್ಧ ಸಾವು

ಮಹಿಳೆಯೊಂದಿಗೆ ಜಾಲಿ ಮಾಡಲು ಲಾಡ್ಜ್ ಗೆ ಬಂದ ಅಜ್ಜ: ಏಕಾಂತದಲ್ಲಿದ್ದಾಗಲೇ ವೃದ್ಧ ಸಾವು

- Advertisement -
- Advertisement -

ಮುಂಬೈ: ಮಹಿಳೆಯೊಂದಿಗೆ ಲಾಡ್ಜ್ ನಲ್ಲಿ ಜಾಲಿ ಮಾಡಲು ಬಂದ ವೃದ್ಧರೊಬ್ಬರು ಏಕಾಂತದಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ.

ನಿನ್ನೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ವರ್ಲಿ ನಿವಾಸಿ 60 ವರ್ಷ ವೃದ್ಧ ಮತ್ತು 40 ವರ್ಷದ ಮಹಿಳೆ ಕುರ್ಲಾದ ಹೋಟೆಲ್‌ಗೆ ಆಗಮಿಸಿದ್ದಾರೆ. ಮೊದಲೇ ಬುಕ್​ ಮಾಡಿರುವ ಕೊಠಡಿಗೆ ಖುಷಿಯಿಂದಲೇ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ನನ್ನ ಗೆಳೆಯ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ರೂಮ್​ನಿಂದ ಮಹಿಳೆ ರಿಸೆಪ್ಶನ್‌ಗೆ ಕರೆ ಮಾಡಿದ್ದಾರೆ. ಅವರು ನೋಡಿದಾಗ ವೃದ್ಧ ಸಾವನ್ನಪ್ಪಿದ್ದರು.

ಬಳಿಕ ನಾವಿಬ್ಬರು ಏಕಾಂತದಲ್ಲಿದ್ದಾಗ ಅವರು ಮದ್ಯ ಸೇವಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುರ್ಲಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!