Wednesday, June 3, 2026
Homeಕರಾವಳಿಮಂಗಳೂರು: ಮೊಬೈಲ್ ಖರೀದಿ ನೆಪದಲ್ಲಿ ಆನ್ ಲೈನ್ ನಲ್ಲಿ ಸಾವಿರಾರು ರೂಪಾಯಿ ವಂಚನೆ

ಮಂಗಳೂರು: ಮೊಬೈಲ್ ಖರೀದಿ ನೆಪದಲ್ಲಿ ಆನ್ ಲೈನ್ ನಲ್ಲಿ ಸಾವಿರಾರು ರೂಪಾಯಿ ವಂಚನೆ

- Advertisement -
- Advertisement -

ಮಂಗಳೂರು : ಆನ್‌ಲೈನ್ ಮೂಲಕ ಮೊಬೈಲ್ ಖರೀದಿಸಲು ಹಣ ಪಾವತಿಸಿದರೂ ಹಣವನ್ನೂ ಮರಳಿಸದೆ ಮೊಬೈಲ್ ನ್ನೂ ನೀಡದೆ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

GADGET FACTORY’ ಎಂಬ ಇನ್ ಸ್ಟಾಗ್ರಾಮ್‌ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಬಂದ ಮಾಹಿತಿಯಂತೆ ಆ ಖಾತೆಯ ಮೆಸೆಂಜರ್‌ನಲ್ಲಿ ದೂರುದಾರ ವ್ಯಕ್ತಿಗೆ ಗೂಗಲ್ ಪೇ ಸಂಖ್ಯೆ ಹಾಗೂ ವಾಟ್ಸಾಪ್ ನಂಬ್ರ ಕಳುಹಿಸಲಾಗಿತ್ತು.

ಅದನ್ನು ನಂಬಿದ ವ್ಯಕ್ತಿ ಹೊಸ ಮೊಬೈಲ್‌ ಬುಕ್ ಮಾಡಿ ಮಾ.೧೩ರಿಂದ ೧೭ರ ಮಧ್ಯೆ ಹಂತ ಹಂತವಾಗಿ 66000 ರೂ.ವನ್ನು ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಖಾತೆಯಿಂದ ಟ್ರಾನ್ಸ್ ಫರ್ ಮಾಡಿದ್ದರು.

ಆದರೆ ಈವರೆಗೂ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಮೊಬೈಲ್ ಅಥವಾ ಪಾವತಿಸಿದ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!