Thursday, April 25, 2024
Homeಇತರಉಗ್ರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸ್ ಸಿಬ್ಬಂದಿ; ಅಪಾಯದಿಂದ ಪಾರಾದ ಏಳು ವರ್ಷದ ಮಗಳು

ಉಗ್ರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸ್ ಸಿಬ್ಬಂದಿ; ಅಪಾಯದಿಂದ ಪಾರಾದ ಏಳು ವರ್ಷದ ಮಗಳು

spot_img
- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಗೆ ಓರ್ವ ಪೊಲೀಸ್ ಹುತಾತ್ಮರಾಗಿದ್ದು, ಅವರ ಏಳು ವರ್ಷದ ಮಗಳು ದಾಳಿಯಿಂದ ಗಾಯಗೊಂಡಿದ್ದಾಳೆ.


ಮಂಗಳವಾರದಂದು ಶ್ರೀನಗರದಲ್ಲಿದ್ದ ಪೊಲೀಸ್ ಮನೆಯ ಹೊರಗಡೆಯಿಂದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ಮೃತಪಟ್ಟಿರುವ ಪೊಲೀಸ್ ನನ್ನು ಸೌರಾ ಪ್ರದೇಶದ ಸೈಫುಲ್ಲಾ ಖಾದ್ರಿ ಎಂದು ಗುರುತಿಸಲಾಗಿದೆ. ಪೊಲೀಸ್ ಪುತ್ರಿ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

- Advertisement -
spot_img

Latest News

error: Content is protected !!