- Advertisement -
![]()
- Advertisement -
ಬೆಂಗಳೂರು: ನಿರ್ಮಾಣ ಹಂತದ ರಾಜಕಾಲುವೆ ಕುಸಿತಗೊಂಡ ಪರಿಣಾಮ 20ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರದ ಕಾಳಿದಾಸ ಬಸ್ ಸ್ಟಾಪ್ ಬಳಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಂಭೀರವಾಗಿ ಗಾಯಗೊಂಡ ಕಾರ್ಮಿಕರನ್ನು ಮೀರ್ ಖಾಸಿಂ (24) ಕಲ್ಕತ್ತ, ಆಸಿಬುಲ್ (22),ಶಿವಪ್ರಸಾದ್ (33), ರೆಹಮಾನ್ ಎಂದು ಗುರುತಿಸಲಾಗಿದೆ.
ಗಾಯಾಳುಗಳು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ನಿನ್ನೆ ವಾಲ್ ಹಾಕಿ ಇವತ್ತು ಮೊಲ್ಡಿಂಗ್ ಹಾಕುವಾಗ ಏಕಾಏಕಿ ಮೊಲ್ಡಿಂಗ್ ಕುಸಿದು ಬಿದ್ದಿದೆ.
- Advertisement -


