Saturday, June 6, 2026
Homeಕರಾವಳಿಕಾಸರಗೋಡುಮಹಿಳೆಯನ್ನು ಸೌದಿಗೆ ಕಳುಹಿಸಲು ಏರ್ ಪೋರ್ಟ್ ಗೆ ತೆರಳುತ್ತಿದ್ದಾಗ ಅಪಘಾತ ; ಒಂದೇ ಕುಟುಂಬದ ನಾಲ್ವರು...

ಮಹಿಳೆಯನ್ನು ಸೌದಿಗೆ ಕಳುಹಿಸಲು ಏರ್ ಪೋರ್ಟ್ ಗೆ ತೆರಳುತ್ತಿದ್ದಾಗ ಅಪಘಾತ ; ಒಂದೇ ಕುಟುಂಬದ ನಾಲ್ವರು ಸಾವು

- Advertisement -
- Advertisement -

ಕೇರಳ; ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಅವಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಕೇರಳದ ಅಂಬಾಲಪುಳದಲ್ಲಿ ನಡೆದಿದೆ.
ತಿರುವನಂತಪುರದ ಅನಾಡ್ ಮೂಲದ ಶೈನಿ ಎಂಬವರಿಗೆ ಸೌದಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಶೈನಿ ಅವರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ಬರಲೆಂದು ಆಕೆಯ ಕುಟುಂಬ ಬೆಳಗ್ಗೆ 5 ಗಂಟೆ ಸುಮಾರಿಗೆ ನೆಡುಂಬಸ್ಸೆರಿ ವಿಮಾನ ನಿಲ್ದಾಣದ ಕಡೆ ಹೋಗುವಾಗ ಅಂಬಾಲಪುಳ ಬಳಿ ಶೈನಿ ಮತ್ತು ಅವರ ಕುಟುಂಬದವರಿದ್ದ ಕಾರು ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.


ಅಪಘಾತದ ತೀವ್ರತೆಗೆ ಶೈನಿ ಹೊರತುಪಡಿಸಿ ಆಕೆಯ ಪತಿ, ಮಗ ಮತ್ತು ಸಹೋದರ ಹಾಗೂ ಸಂಬಂಧಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮೃತರನ್ನು ಶಿಜು (34), ಮುಧೀಶ್ ಲಾಲ್ (37), ಅಭಿರಾಗ್ (25), ಅಂಬಾಡಿ (12) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶೈನಿ ಅವರನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!