Friday, June 5, 2026
Homeಕರಾವಳಿಉಡುಪಿಉಡುಪಿ : ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ: ಅಜಯ್ ದೇವಗನ್ ಗೆ ಎಚ್ಚರಿಕೆ ನೀಡಿದ ಕರವೇ...

ಉಡುಪಿ : ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ: ಅಜಯ್ ದೇವಗನ್ ಗೆ ಎಚ್ಚರಿಕೆ ನೀಡಿದ ಕರವೇ ಪ್ರವೀಣ್‌ ಶೆಟ್ಟಿ

- Advertisement -
- Advertisement -

ಉಡುಪಿ: ಅಜಯ್ ದೇವಗನ್ ಸುದೀಪ್ ಟ್ವೀಟ್ ವಿವಾದ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದಾರೆ. ಇಡೀ ಕನ್ನಡಿಗರು ಅವರ ಬೆಂಬಲಕ್ಕೆ ನಿಂತಿದ್ದೇವೆ. ಅಜಯ್ ದೇವಗನ್ ಮೊದಲು ಆಲೋಚನೆ ಮಾಡಬೇಕು. 22 ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ಅದರಲ್ಲಿ ಹಿಂದಿಯೂ ಕೂಡ ಒಂದು ಅಷ್ಟೇ.ಯಾವುದೇ ಕಾರಣಕ್ಕೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ ಅಂದಿದ್ದಾರೆ.

ಹಾಗೇ ಕನ್ನಡಕ್ಕೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ. ಅಜಯ್ ದೇವಗನ್ ಗೆ ನಾವು ಎಚ್ಚರಿಕೆ ಕೊಡುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕ ಕನ್ನಡಿಗರನ್ನು ಬಿಟ್ಟು ಯಾವತ್ತೂ ಭಾರತ ದೇಶ ಆಗಿಲ್ಲ.ಕನ್ನಡಿಗರನ್ನು ಕೆಣಕಲು ಬಂದರೆ ರಕ್ಷಣಾ ವೇದಿಕೆ ಕೈಕಟ್ಟಿ ಕೂರಲ್ಲ. ಅಜಯ್ ದೇವಗನ್ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ. ಅಜಯ್ ದೇವಗನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಅಜಯ್ ದೇವಗನ್ ಸಿನಿಮಾ ಕರ್ನಾಟಕಕ್ಕೆ ಕಾಲಿಡಲು ಬಿಡಲ್ಲ. ಸರ್ಕಾರ ಕನ್ನಡಿಗರ ಪರವಾಗಿ ಗಮನಹರಿಸಬೇಕು. ನಾವೆಲ್ಲ ಕನ್ನಡಿಗರು ಒಗ್ಗಟಾಗಿ ಹಿಂದಿಯನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೇವೆ. ಹಿಂದಿಯನ್ನು ನಮ್ಮ ಮೇಲೆ ಹೇರಿ ಉದ್ಯೋಗ ಬದುಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

Latest News

error: Content is protected !!