Monday, June 8, 2026
Homeತಾಜಾ ಸುದ್ದಿರಥೋತ್ಸವದ ವೇಳೆ ಘೋರ ದುರಂತ- ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವು

ರಥೋತ್ಸವದ ವೇಳೆ ಘೋರ ದುರಂತ- ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವು

- Advertisement -
- Advertisement -

ತಂಜಾವೂರ್: ತಮಿಳುನಾಡಿನ ತಂಜಾವೂರಿ ಕಲಿಮೇಡು ಎಂಬಲ್ಲಿ ದೇವಾಲಯದ ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಂಜಾವೂರು ನಲ್ಲಿ ದೇವಾಲಯದ ರಥೋತ್ಸವದ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಥೋತ್ಸವದ ಮೆರವಣಿಗೆಯು ಮಧ್ಯರಾತ್ರಿ ಪ್ರಾರಂಭವಾಗಿದ್ದು ಬೆಳಿಗ್ಗೆ 3 ಗಂಟೆ ಸುಮಾರಿಗೆ ರಥದ ಮೇಲೆ ನಿರ್ಮಿಸಲಾದ ಗುಮ್ಮಟ ಮತ್ತು ಅಲಂಕಾರಗಳು ಹೈ-ಟೆನ್ಷನ್ ತಂತಿಯನ್ನು ಮುಟ್ಟಿದಾಗ ಘಟನೆ ಸಂಭವಿಸಿದೆ.

- Advertisement -

Latest News

error: Content is protected !!