Thursday, July 16, 2026
Homeರಾಜಕೀಯಹನುಮಾನ್ ಚಾಲೀಸಾವನ್ನು ಪಠಿಸುವವರು 'ದಾದಾಗಿರಿ' ಮಾಡುತ್ತಾರಾ? : ಸಿಟಿ ರವಿ

ಹನುಮಾನ್ ಚಾಲೀಸಾವನ್ನು ಪಠಿಸುವವರು ‘ದಾದಾಗಿರಿ’ ಮಾಡುತ್ತಾರಾ? : ಸಿಟಿ ರವಿ

- Advertisement -
- Advertisement -

ಮುಂಬೈ: ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಶಿವಸೇನೆಗೆ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿಯ ಉಸ್ತುವಾರಿ ಸಿಟಿ ರವಿ ಅವರು ಉದ್ಧವ್ ಠಾಕ್ರೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹನುಮಾನ್ ಚಾಲೀಸ ಪಠಿಸುವ ವಿವಾದಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ ಮತ್ತು ಶಾಸಕ ರವಿ ರಾಣಾ ಬಂಧಸಿದ ಬಳಿಕ ಉದ್ಧವ್ ಠಾಕ್ರೆ ‘ದಾದಾಗಿರಿ’ ಕುರಿತು ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಹನುಮಾನ್ ಚಾಲೀಸಾವನ್ನು ಪಠಿಸುವವರು ‘ದಾದಾಗಿರಿ’ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಸಂಸದ ನವನೀತ್ ರಾಣಾ ಬಂದಿದ್ದು ಹನುಮಾನ್ ಚಾಲೀಸಾ ಪಠಿಸಲು ಹೊರತು ದಾದಾಗಿರಿ ಮಾಡಲು ಅಲ್ಲ. ಅವರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಿದ್ದಾರೆ. ಗಂಭೀರ ಆರೋಪ ಎದುರಿಸುತ್ತಿರುವ ನವಾಬ್ ಮಲಿಕ್ ನಿಜವಾಗಿಯೂ ಸಚಿವ ಸಂಪುಟದಲ್ಲಿರುವ ದೇಶದ್ರೋಹಿ. ಅವರ ವಿರುದ್ಧದ ಆರೋಪಗಳನ್ನು ಉದ್ಧವ್ ಠಾಕ್ರೆ ಪರಿಗಣಿಸಿದ್ದರೆ ನವಾಬ್ ಮಲಿಕ್ ಸಂಪುಟದಲ್ಲಿ ಇರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!