Saturday, May 18, 2024
Homeಕರಾವಳಿಹೆಲ್ಮೆಟ್ ಧರಿಸದ ಕಾರು ಚಾಲಕನಿಗೆ 500 ರೂಪಾಯಿ ದಂಡ

ಹೆಲ್ಮೆಟ್ ಧರಿಸದ ಕಾರು ಚಾಲಕನಿಗೆ 500 ರೂಪಾಯಿ ದಂಡ

spot_img
- Advertisement -
- Advertisement -

ಕೇರಳ ಹೆಲ್ಮೆಟ್ ಧರಿಸಿಲ್ಲ ಎಂದು ಕಾರು ಚಾಲಕರೊಬ್ಬರಿಗೆ 500 ರೂಪಾಯಿ ದಂಡ ಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಮಾರುತಿ ಆಲ್ಟೋ ಚಾಲಕರೊಬ್ಬರಿಗೆ ಕೇರಳ ಸಂಚಾರ ಪೊಲೀಸರಿಂದ 500 ರೂಪಾಯಿ ಚಲನ್ ಪಡೆದಿದ್ದಾರೆ.

ಡಿಸೆಂಬರ್ 7, 2021 ರ ದಿನಾಂಕದ ಚಲನ್ ಇದಾಗಿದ್ದು, ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಾರೆ . ಆದರೆ, ಚಲನ್ ನಲ್ಲಿ ವಾಹನದ ಹೆಸರನ್ನು ಕಾರು ಅಂತಾ ನಮೂದಿಸಲಾಗಿದೆ. ನೋಂದಣಿ ಸಂಖ್ಯೆ ಅಜಿತ್ ಅವರ ಕಾರು ಎಂದು ಸೂಚಿಸುತ್ತದೆ.

ಮೋಟಾರು ಬೈಕಿನ ನೋಂದಣಿಯು ಚಲನ್‌ಗೆ ಲಗತ್ತಿಸಲಾದ ಚಿತ್ರವು ಕಾರಿನಂತೆಯೇ ಇರುವುದರಿಂದ ಈ ಯಡವಟ್ಟಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮೋಟಾರು ವಾಹನ ಇಲಾಖೆಗೆ ಕಾರು ಚಾಲಕ ಹಾಗೇನೇ ಮಾಲೀಕರಾಗಿರುವ ಅಜಿತ್ ದೂರು ನೀಡಲು ನಿರ್ಧರಿಸಿದ್ದಾರೆ.

ಇನ್ನು ಈ ಸಂಬಂಧ ಪೊಲೀಸರನ್ನು ಸಂಪರ್ಕಿಸಿದಾಗ, ನೋಂದಣಿ ಸಂಖ್ಯೆಯನ್ನು ಸಿಸ್ಟಮ್‌ಗೆ ನಮೂದಿಸುವಾಗ ಇದು ಕ್ಲೆರಿಕಲ್ ಅಥವಾ ಟೈಪೋಗ್ರಾಫಿಕಲ್ ದೋಷದ ಪರಿಣಾಮದಿಂದ ಈ ರೀತಿ ಉಂಟಾಗಿರಬಹುದು ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!