Saturday, June 6, 2026
Homeಕರಾವಳಿಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಸುಳ್ಯದಲ್ಲಿ ವಿಮೆನ್ ಇಂಡಿಯಾ ಮೂವೆಂಟ್ ಪ್ರತಿಭಟನೆ

ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಸುಳ್ಯದಲ್ಲಿ ವಿಮೆನ್ ಇಂಡಿಯಾ ಮೂವೆಂಟ್ ಪ್ರತಿಭಟನೆ

- Advertisement -
- Advertisement -

ಸುಳ್ಯ: ವಿಮೆನ್ ಇಂಡಿಯಾ ಮೂವೆಂಟ್ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸರ್ಕಾರದ ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಅಂಕತ್ತಡ್ಕ ಜಂಕ್ಷನ್ ನಲ್ಲಿ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಯಿತು.

ವಿಮೆನ್ ಇಂಡಿಯಾ ಮೂವೆಂಟ್ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷೆ ನಪ್ರಿಯಾ ಬೆಳ್ಳಾರೆ ಪ್ರತಿಭಟನಾಕಾರ ರನ್ನುದ್ದೇಶಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಯಿಂದ ಹಾಗೂ ಅನಿಯಂತ್ರಿತ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಬದುಕಲು ಕಷ್ಟವಾಗಿದೆ ಈ ಸರಕಾರವನ್ನು ದೇಶದಿಂದ ನಿರ್ಮೂಲನೆ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷೆ ಸಬೀನಾ ಅಂಕತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಅನ್ ಶಿಫಾ ಬೆಳ್ಳಾರೆ ನಿರೂಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸದಸ್ಯರಾದ ಸಮೀನಾ ಬೆಳ್ಳಾರೆ,ಮಿಸಿ ಯಾ ಅಂಕತಡ್ಕಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!