Saturday, June 6, 2026
Homeಕರಾವಳಿಉಡುಪಿಶಾಂಭವಿ ಲಾಡ್ಜ್ ಗೆ ಆಗಮಿಸಿದ ಸಂತೋಷ್ ಪಾಟೀಲ್ ಕುಟುಂಬಸ್ಥರು: ಪಂಚನಾಮೆ ಆರಂಭಿಸಿದ ಎಫ್.ಎಸ್.ಎಲ್ ತಂಡ

ಶಾಂಭವಿ ಲಾಡ್ಜ್ ಗೆ ಆಗಮಿಸಿದ ಸಂತೋಷ್ ಪಾಟೀಲ್ ಕುಟುಂಬಸ್ಥರು: ಪಂಚನಾಮೆ ಆರಂಭಿಸಿದ ಎಫ್.ಎಸ್.ಎಲ್ ತಂಡ

- Advertisement -
- Advertisement -

ಉಡುಪಿ: ಸಂತೋಷ್ ಪಾಟೀಲ್ ಮೃತದೇಹ ಇರುವ ಶಾಂಭವಿ ಲಾಡ್ಜ್ ಗೆ ಸಂತೋಷ್ ಪಾಟೀಲ್ ಕುಟುಂಬಸ್ಥರು ಆಗಮಿಸಿದ್ದಾರೆ. ಎಫ್ ಎಸ್ ಎಲ್ ಟೀಮ್ ಆಗಮಿಸಿರುವ ಹಿನ್ನೆಲೆಯಲ್ಲಿ ಲಾಡ್ಜ್ ಗೆ ಬಂದಿದ್ದಾರೆ ಸಂತೋಷ ಪಾಟೀಲ್ ಕುಟುಂಬಸ್ಥರು.


ಸಂತೋಷ್ ಕುಟುಂಬಸ್ಥರು ಬಂದಿರುವ ಹಿನ್ನೆಲೆ ಅವರ ಸಮ್ಮುಖದಲ್ಲಿ ಎಫ್.ಎಸ್.ಎಲ್ ತಂಡ ಪಂಚನಾಮೆ ಆರಂಭಿಸಿದೆ. ಸಂತೋಷ್ ಸಂಬಂಧಿಕರ ನೇತೃತ್ವದಲ್ಲಿ ಪಂಚನಾಮೆ ನಡೆಯುತ್ತಿದೆ. ಲಾಡ್ಜ್ ಒಳಗೆ ಎಫ್.ಎಸ್.ಎಲ್ ಸಿಬ್ಬಂದಿ, ಎಎಸ್ಪಿ ಸಿದ್ದಲಿಂಗಪ್ಪ, ತನಿಖಾಧಿಕಾರಿ ಪ್ರಮೋದ್ ಪಂಚನಾಮೆಯಲ್ಲಿ ಭಾಗಿಯಾಗಿದ್ದಾರೆ.


ಇನ್ನು ಹಾಸಿಗೆ ಮೇಲೆ ಮಲಗಿರುವಂತೆ ಸಂತೋಷ್ ಪಾಟೀಲ್ ಶವವಿದೆ. ಹಸಿರು ಶರ್ಟ್ ಮತ್ತು ರೆಗ್ಯೂಲರ್ ಪ್ಯಾಂಟ್, ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಮೃತದೇಹವಿದ್ದು, ರೂಂ ನ ಡಸ್ಟ್ ಬಿನ್ ನಲ್ಲಿ ವಿಷದ ಬಾಟಲಿ ತರದ ಡಬ್ಬಿ ಪತ್ತೆಯಾಗಿದೆ.

- Advertisement -

Latest News

error: Content is protected !!