Friday, June 5, 2026
Homeಕರಾವಳಿಉಡುಪಿಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ :  ಸಚಿವ ಈಶ್ವರಪ್ಪ ವಿರುದ್ಧ ಉಡುಪಿಯಲ್ಲಿ  ಎಫ್ಐಆರ್ ದಾಖಲು

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ :  ಸಚಿವ ಈಶ್ವರಪ್ಪ ವಿರುದ್ಧ ಉಡುಪಿಯಲ್ಲಿ  ಎಫ್ಐಆರ್ ದಾಖಲು

- Advertisement -
- Advertisement -

ಉಡುಪಿ; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈಶ್ವರಪ್ಪ ಆಪ್ತರಾದ ಬಸವರಾಜ ಮತ್ತು ರಮೇಶ್ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಆರೋಪಿ ನಂ.1.ಸಚಿವರ ಆಪ್ತ ಬಸವರಾಜ್ A2 ಆರೋಪಿ. ಇನ್ನೋರ್ವ ಆಪ್ತ ರಮೇಶ್ A3 ಆರೋಪಿ ಎಂದು ಎಫ್. ಐ. ಆರ್ ದಾಖಲಾಗಿದೆ.

ಸಂತೋಷ್ ಸೋದರ ಸಂಬಂಧಿ ಪ್ರಶಾಂತ ಪಾಟೀಲ್  ಎಂಬವರು ದೂರು ದಾಖಲಿಸಿದ್ದಾರೆ. ಶೇ. 40 ಪರ್ಸೆಂಟ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಸಚಿವ ಈಶ್ವರಪ್ಪ ಮತ್ತು ಆಪ್ತರು ಎಂದು ಸಂತೋಷ್ ಆರೋಪಿಸಿದ್ದರು. ರಸ್ತೆ ಕಾಮಗಾರಿಯ 4 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದರು ಸಂತೋಷ್.
ಬಿಲ್ ಮಂಜೂರು ಮಾಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪಿಸಲಾಗಿದೆ.

- Advertisement -

Latest News

error: Content is protected !!