Saturday, June 6, 2026
Homeಕರಾವಳಿಉಡುಪಿಮುಸ್ಲಿಮರು ಹಿಂದೂಗಳ ಭಾವನೆ ಕೆರಳಿಸಿದ್ದಾರೆ- ಈಗ ಹಿಂದುಗಳೂ ಜಾಗೃತರಾಗಿದ್ದಾರೆ: ಶಾಸಕ ರಘುಪತಿ ಭಟ್

ಮುಸ್ಲಿಮರು ಹಿಂದೂಗಳ ಭಾವನೆ ಕೆರಳಿಸಿದ್ದಾರೆ- ಈಗ ಹಿಂದುಗಳೂ ಜಾಗೃತರಾಗಿದ್ದಾರೆ: ಶಾಸಕ ರಘುಪತಿ ಭಟ್

- Advertisement -
- Advertisement -

ಉಡುಪಿ: ಭಟ್ಕಳದಲ್ಲಿ ಹಿಂದೆ ಹಿಂದೂಗಳ ಅಂಗಡಿಗಳನ್ನು ಮುಸ್ಲಿಂಮರು ಬಂದ್ ಮಾಡಿಸಿದರು. ನಾವ್ಯಾರು ಈ ಗಲಾಟೆಗೆ ಪ್ರೇರೇಪಿಸಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮುಸ್ಲಿಮರು ಮಕ್ಕಳ ತಲೆ ಹಾಳು ಮಾಡಿದ್ದಾರೆ, ಹಿಂದೂಗಳ ಭಾವನೆ ಕೆರಳಿಸಿದ್ದಾರೆ. ಈಗ ಹಿಂದೂ ಜಾಗೃತನಾಗಿದ್ದಾನೆ. ಈ ಗಲಾಟೆ ಕೊನೆ ಆಗಬೇಕು ಎಂಬ ಆಸೆ ನನಗೂ ಇದೆ ಎಂದರು.

ಇನ್ನು ಉಡುಪಿ ಸೌಹಾರ್ದಯುತ ಜಿಲ್ಲೆ. ಹಲಾಲ್ ಅಂಗಡಿಗಳನ್ನು ಮುಚ್ಚಬಾರದು, ಆದರೆ ಹಲಾಲ್ ಮಾಂಸ ತಿನ್ನುವುದು ಬೇಡ. ಈಗ ಸರಕಾರಿ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಮ್ಮೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಎಲ್ಲವೂ ಒಂದು ಶಾಂತಿಯುತ ಸ್ಥಿತಿಗೆ ಬರಬಹುದು ಎಂಬ ಭಾವನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!