Friday, April 26, 2024
Homeತಾಜಾ ಸುದ್ದಿಏ.8ರಿಂದ 13ರ ವರೆಗೆ ಕೆಜಿಎಫ್ ಚಾಪ್ಟರ್ 1 ಪ್ರೀ ರಿಲೀಸ್

ಏ.8ರಿಂದ 13ರ ವರೆಗೆ ಕೆಜಿಎಫ್ ಚಾಪ್ಟರ್ 1 ಪ್ರೀ ರಿಲೀಸ್

spot_img
- Advertisement -
- Advertisement -

ಬೆಂಗಳೂರು: ಏ.8ರಿಂದ ಏ.13ರವರೆಗೆ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಹೊಂಬಾಳೆ ಫಿಲಂಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.


ಸಿನಿಪ್ರಿಯರ ವಲಯದಲ್ಲಿ ಈಗ ಎಲ್ಲೆಲ್ಲೂ ‘ಕೆಜಿಎಫ್: ಚಾಪ್ಟರ್ 2′ ಸಿನಿಮಾದ ಚರ್ಚೆಯೇ ನಡೆಯುತ್ತಿದೆ. ಕೆಜಿಎಫ್ ಚಾಪ್ಟರ್1’ ತೆರೆಕಂಡಿದ್ದು 2018ರ ಡಿಸೆಂಬರ್‌ನಲ್ಲಿ ಅದಾಗಿ ಮೂರೂವರೆ ವರ್ಷವೇ ಕಳೆದಿದೆ. ಹಾಗಾಗಿ ಅನೇಕರಿಗೆ ಈ ಸಿನಿಮಾದ ಕಥೆಯ ವಿವರಗಳು ಮರೆತು ಹೋಗಿರಬಹುದು.ಕೆಲವರು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿಲ್ಲದೇ ಇರಬಹುದು.


ಹಾಗಾಗಿ ಇನ್ನೊಮ್ಮೆ ಬಿಡುಗಡೆ ಮಾಡುವುದು ಸೂಕ್ತ ಎಂದು ತಂಡ ನಿರ್ಧರಿಸಿದೆ. ಆದ್ದರಿಂದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ‘ಕೆಜಿಎಫ್: ಚಾಪ್ಟರ್1’ ಚಿತ್ರ ಮರು ಬಿಡುಗಡೆ ಆಗಲಿದೆ.

- Advertisement -
spot_img

Latest News

error: Content is protected !!