Monday, June 8, 2026
Homeಉತ್ತರ ಕನ್ನಡಮನೆ ಮೇಲೆ ಉರುಳಿದ‌ ತೆಂಗಿನ ಮರ: ನಾಲ್ವರಿಗೆ ಗಾಯ

ಮನೆ ಮೇಲೆ ಉರುಳಿದ‌ ತೆಂಗಿನ ಮರ: ನಾಲ್ವರಿಗೆ ಗಾಯ

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಭಾರೀ ಗಾಳಿ ಮತ್ತು ಮಳೆಯ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಮನೆ ಮೇಲೆ ತೆಂಗಿನ ಮರ ಉರುಳಿಬಿದ್ದಿದೆ.

ಸಿದ್ದಾಪುರ ತಾಲೂಕಿನ ಕಡಕೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.‌

ಮನೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿದ್ದ ಮರ ಉರುಳಿ ಬಿದ್ದಿದ್ದು, ಹೊನ್ನಪ್ಪ ಕೃಷ್ಣ ನಾಯ್ಕ (40), ದಯಾನಂದ ಕೃಷ್ಣ ನಾಯ್ಕ (35), ಮಕ್ಕಳಾದ ಧವನ್ ದಯಾನಂದ ನಾಯ್ಕ (9), ಹಾಗೂ ಹೇಮಶ್ರೀ ಹೊನ್ನಪ್ಪ ನಾಯ್ಕ ( 7) ಗಾಯಗೊಂಡವರಾಗಿದ್ದಾರೆ.

ಗಾಯಾಳುಗಳಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌

ನಿನ್ನೆ ಶಿರಸಿ-ಸಿದ್ಧಾಪುರದಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿದು ಜನಜೀವನಕ್ಕೆ ಸಮಸ್ಯೆ ಎದುರಾಗಿತ್ತು.‌

- Advertisement -

Latest News

error: Content is protected !!