Friday, June 27, 2025
Homeಮನರಂಜನೆವಿಮಾನ ಓಡಿಸಬಲ್ಲ ಏಕೈಕ ಕನ್ನಡದ ನಟಿ ಇವರೆ ನೋಡಿ, ಶಾಕ್ ಆಗ್ತೀರಾ.

ವಿಮಾನ ಓಡಿಸಬಲ್ಲ ಏಕೈಕ ಕನ್ನಡದ ನಟಿ ಇವರೆ ನೋಡಿ, ಶಾಕ್ ಆಗ್ತೀರಾ.

spot_img
- Advertisement -
- Advertisement -

ಒಬ್ಬ ನಟಿ ಹಲವು ಭಾಷೆಗಳಲ್ಲಿ ನಟಿಸಬಹುದು ಆದರೆ ಒಂದು ಭಾಷೆಯ ಮೇಲೆ ತುಂಬಾ ಅಭಿಮಾನ ಇಟ್ಟುಕೊಳ್ಳುತ್ತಾರೆ ಮತ್ತೊಬ್ಬರ ಮೇಲೆ ತುಂಬಾ ಅಭಿಮಾನ ಇಟ್ಟುಕೊಳ್ಳುತ್ತಾರೆ ಅದು ಯಾರು ಅಲ್ಲ ನಟಿ ಮಾಧವಿ. ಒಂದು ಕಾಲದ ಕನ್ನಡದ ಮೇರುನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿಗೆ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಮುಂತಾದ ಮೇರು ಸಿನಿ ಕಲಾವಿದರ ಜೊತೆ ಅಭಿನಯಿಸಿದ್ದಾರೆ. 1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ.

ಮಾಧವಿಯದ್ದು ಅರೇಂಜ್ ಮ್ಯಾರೇಜ್.

ಮಾಧವಿ ಹಿತೈಷಿಗಳಾದ ಸ್ವಾಮಿರಾಮ ಅವರ ಅಣತಿಯಂತೆ ಅಮೆರಿಕದಲ್ಲಿರುವ ರಾಲ್ಪ್ ಶರ್ಮಾ ಜೊತೆ ಫೆಬ್ರವರಿ 14, 1996ರಂದು ಮಾಧವಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರ ಪತಿ ಜರ್ಮನಿಯವರು. ಭಾರತದಲ್ಲಿರುವಷ್ಟು ದಿನ ದೇವಸ್ಥಾನ ಹೋಗುವುದು, ಪೂಜೆ ಮಾಡುವುದು, ಸಂಪ್ರದಾಯ ಆಚಾರ-ವಿಚಾರಗಳನ್ನು ಅಷ್ಟೊಂದು ಆಚರಿಸಿದ ಮಾಧವಿ ಅಮೆರಿಕಕ್ಕೆ ಹೋದ ನಂತರದಲ್ಲಿ ಭಾರತೀಯ ಸಂಸ್ಕೃತಿ ಮರೆಯಬಾರದೆಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ, ಗಣಪತಿ ಸ್ತೋತ್ರವನ್ನು ಹೇಳುತ್ತಾರಂತೆ. ರಾಮ ಅವರು ಹೇಳಿದಂತೆ ಮಾಧವಿ ಗಂಡ ತುಂಬ ಮೃದು ಸ್ವಭಾವದ, ನಂಬಿಕಾರ್ಹ, ಉದಾರಿ ಅಷ್ಟೇ ಅಲ್ಲದೆ ಮಾಧವಿಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ. ತುಂಬ ಶಾಂತಿಯುತವಾಗಿ, ಪ್ರೀತಿಯಿಂದ ಈ ದಂಪತಿ ಈಗ ವಿದೇಶದಲ್ಲಿ ನೆಲೆಸಿದ್ದಾರೆ.

ಸ್ವಂತ ವಿಮಾನದ ಒಡತಿ

ಮಾಧವಿ ಇದೀಗ ಇವರು ಹತ್ತು ಸಾವಿರ ಕೋಟಿಗಳ ಒಡತಿ ಇವರು ಕಂಪನಿಯನ್ನು ಕೂಡ ನಡೆಸುತ್ತಿದ್ದಾರೆ. ಸ್ವಂತ ವಿಮಾನವನ್ನು ಕೂಡ ಹೊಂದಿದ್ದಾರೆ. ಬೇರೆ ದೇಶಗಳಿಗೆ ಕಂಪನಿ ಕೆಲಸದ ಮೇಲೆ ಹೋಗಬೇಕು ಅಂದಾಗ ವಿಮಾನದಲ್ಲಿ ಪ್ರಯಾಣ ನಡೆಸುತ್ತಾರೆ ಹಾಗೂ ಸ್ವಂತ ಇವರೇ ವಿಮಾನವನ್ನು ಕೂಡ ಖರೀದಿ ಮಾಡಿದ್ದಾರೆ ಹಾಗೂ ವಿಮಾನವನ್ನು ಕೂಡ ಇವರೇ ಓಡಿಸುತ್ತಾರೆ ಮತ್ತು ಅವರ ಮಕ್ಕಳಿಗೂ ಕೂಡ ಭಾರತದ ಸಂಸ್ಕೃತಿಯ ಬಗ್ಗೆ ಹೇಳಿಕೊಡುತ್ತಿದ್ದಾರೆ ಅಡುಗೆ ಹಾಗೂ ನೃತ್ಯ ತಾಯಿನಾಡಿನ ಸಂಪ್ರದಾಯವನ್ನು ಕೂಡ ಹೇಳಿಕೊಟ್ಟಿದ್ದಾರೆ ಎಷ್ಟೇ ಆಗಲಿ ಇವರು ಭಾರತದ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ

ಮೂರು ಹೆಣ್ಣುಮಕ್ಕಳ ತಾಯಿ ಮಾಧವಿ

ಟಿಫನಿ, ಪ್ರಿಸಿಲ್ಲ, ಎವಿಲಿನ್ ಎಂಬ ಮೂವರು ಹೆಣ್ಣುಮಕ್ಕಳಿದ್ದಾರೆ ಮಾಧವಿಗೆ. ಮಾಧವಿ ಮದುವೆಯಾಗಿ 23 ವರ್ಷಗಳು ಕಳೆದಿವೆ. ಮೂರು ಹೆಣ್ಣುಮಕ್ಕಳು, ಪತಿಯ ಜೊತೆಗೆ ವಿದೇಶದಲ್ಲಿ ತುಂಬ ಚೆನ್ನಾಗಿ ಜೀವನ ಸಾಗಿಸುತ್ತಿದ್ದಾರೆ ಇವರು.

ಈಗ ಅಮೆರಿಕದಲ್ಲಿ ಮಾಧವಿ ವೃತ್ತಿಯೇನು?

ಸಂಬಂಧಿಕರು, ಪತಿ ಜೊತೆ ಸೇರಿ ಮಾಧವಿ ಸ್ವಂತ ಔಷಧ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸಿನಿಮಾ ನಟಿಯಾಗಿ, ನಂತರದಲ್ಲಿ ಪೂರ್ಣ ಪ್ರಮಾಣದ ತಾಯಿಯಾಗಿ, ಈಗ ಮಹಿಳಾ ಉದ್ಯಮಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮಾಧವಿ.

ಚಿರಂಜೀವಿ ಜೊತೆ ಅತಿ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಮಾಧವಿ

ತೆಲುಗು ನಟ ಚಿರಂಜೀವಿ ಜೊತೆ ಮಾಧವಿಯವರು ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್, ಮಮ್ಮೂಟಿ, ಶರತ್‌ ಬಾಬು, ಧರ್ಮೇಂದ್ರ, ಗುಲ್ಶನ್ ಗ್ರೋವರ್, ಜಯಪ್ರದಾ, ರಿಷಿ ಕಪೂರ್, ಜಿತೇಂದ್ರ ಮುಂತಾದವರ ಜೊತೆಯೂ ನಟಿಸಿದ್ದಾರೆ ನಟಿ ಮಾಧವಿ

ಮದುವೆಯಾಗುವ ಮುಂಚೆ ಮಾಧವಿಗೆ ಇದ್ದ ಆಸೆ ಇದೇ..

ಮದುವೆಯಾಗುವ ಮುಂಚೆ ಮಾಧವಿ ಮತ್ತು ಅವರ ಗಂಡನಿಗೆ ಇದ್ದಿದ್ದು ಎರಡೇ ಎರಡು ಉದ್ದೇಶ, ಅವು: ಇರುವಷ್ಟು ದಿನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸಂಪಾದಿಸಿದ ಹಣವನ್ನು ಚಾರಿಟಿಗೆ ಬಳಸಿಕೊಳ್ಳಬೇಕು ಎಂದಾಗಿತ್ತು.

- Advertisement -
spot_img

Latest News

error: Content is protected !!