Thursday, June 4, 2026
HomeUncategorizedಮಂಗಳೂರು: ಕೊಡಿಯಾಲ್ ಬೈಲ್ ನ ವೃತ್ತಕ್ಕೆ ಹೊಸ ರೂಪ

ಮಂಗಳೂರು: ಕೊಡಿಯಾಲ್ ಬೈಲ್ ನ ವೃತ್ತಕ್ಕೆ ಹೊಸ ರೂಪ

- Advertisement -
- Advertisement -

ಮಂಗಳೂರು: ಇಡೀ ರಾಷ್ಟ್ರವೇ ಬೆರಗಾಗುವಂತಹ ಕೃತಿಗಳನ್ನು ಸೃಷ್ಟಿಸಿದ ಮಂಜೇಶ್ವರ ಗೋವಿಂದ ಪೈ ಅವರ ಹೆಸರಿನಲ್ಲಿರುವ ಮಂಗಳೂರಿನ ಕೊಡಿಯಾಲ್ ಬೈಲ್ ನ ವೃತ್ತ ಹೊಸ ರೂಪದೊಂದಿಗೆ ಮೈದಳೆದುಕೊಂಡಿದೆ.

ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಆಧುನಿಕತೆಯ ಸ್ಪರ್ಶ ಪಡೆದು ಸಿದ್ಧಗೊಂಡಿರುವ ಈ ವೃತ್ತ ಭವಿಷ್ಯದ ಪೀಳಿಗೆಗೆ ಸಾಹಿತ್ಯಲೋಕದ ಧ್ರುವತಾರೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನೆನಪನ್ನು ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲಿದೆ.

ರಾಷ್ಟ್ರಕವಿ ಗೋವಿಂದ ಪೈಗಳು ಕೈಯಲ್ಲಿ ನವಭಾರತ ಪತ್ರಿಕೆ ಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿ ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಅದರ ನಿರ್ಮಾಣವನ್ನು ಕಾರ್ಕಳದ ಶಿಲ್ಪಿ ಕೃಷ್ಣ ಆಚಾರಿಯವರ ತಂಡದವರು ಮಾಡಿದ್ದಾರೆ.

- Advertisement -

Latest News

error: Content is protected !!