Thursday, June 4, 2026
Homeಉತ್ತರ ಕನ್ನಡಮುರೇಗಾರ ಫಾಲ್ಸ್ ನಲ್ಲಿ ಮುಳುಗಿ ವ್ಯಕ್ತಿ ಸಾವು

ಮುರೇಗಾರ ಫಾಲ್ಸ್ ನಲ್ಲಿ ಮುಳುಗಿ ವ್ಯಕ್ತಿ ಸಾವು

- Advertisement -
- Advertisement -

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮುರೇಗಾರ ಫಾಲ್ಸ್ ನಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ್ದಾರೆ.

ಫಾಲ್ಸ್ ನಲ್ಲಿ ಈಜುತ್ತಿರುವಾಗ ತುಮಕೂರು ಮೂಲದ ನವೀನ ಕುಮಾರ್ (35) ಎಂಬವರು ಮುಳುಗಿ ಮೃತಪಟ್ಟಿದ್ದಾರೆ.

ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನವೀನ ಕುಮಾರ್, ಸುಮಾರು ಐವತ್ತು ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ

ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!