Monday, June 8, 2026
Homeಉತ್ತರ ಕನ್ನಡಬೇಲೇಕೇರಿ ಬಂದರು ಅದಿರು ರಫ್ತು ಪ್ರಕರಣ: ಜನಾರ್ದನ ರೆಡ್ಡಿ, ಆನಂದ್ ಸಿಂಗ್ ಗೆ ಅಂಕೋಲಾ ಕೋರ್ಟ್...

ಬೇಲೇಕೇರಿ ಬಂದರು ಅದಿರು ರಫ್ತು ಪ್ರಕರಣ: ಜನಾರ್ದನ ರೆಡ್ಡಿ, ಆನಂದ್ ಸಿಂಗ್ ಗೆ ಅಂಕೋಲಾ ಕೋರ್ಟ್ ಜಾಮೀನು

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ಸಂಬಂಧ‌ ಸಚಿವ ಆನಂದ್ ಸಿಂಗ್, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತು ಶಾಸಕ ನಾಗೇಂದ್ರ ಅವರಿಗೆ ಜಾಮೀನು ದೊರತಿದೆ. ಇಂದು ಅಂಕೋಲಾದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆನಂದ್ ಸಿಂಗ್, ಜನಾರ್ಧನ ರೆಡ್ಡಿ ಸೇರಿದಂತೆ ಏಳು ಮಂದಿ ಹಾಜರಾಗಿದ್ದರು.

2009 ರಿಂದ 2010ರ ವರೆಗೆ ಸುಮಾರು 35 ಲಕ್ಷ ಟನ್ ಅದಿರು ಅಕ್ರಮ ರಫ್ತು ಆರೋಪ ಪ್ರಕರಣದಲ್ಲಿ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಸ್ಥಳೀಯ ವಕೀಲರಾದ ನಾಗರಾಜ ನಾಯಕ ಅವರ ಮೂಲಕ‌ ನ್ಯಾಯಾಲಯಕ್ಕೆ ಆರೋಪಿತರು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿತರಿಗೆ ಜಾಮೀನು ನೀಡಿದೆ‌.

- Advertisement -

Latest News

error: Content is protected !!