Thursday, June 4, 2026
Homeತಾಜಾ ಸುದ್ದಿಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

- Advertisement -
- Advertisement -

ಹೊಸದಿಲ್ಲಿ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ತಿಳಿಸಿದೆ.

ಬಿಎಸ್‌ಎಫ್ ಅಧಿಕಾರಿಗಳ ಪ್ರಕಾರ, ಫಿರೋಜ್‌ಪುರ ಸೆಕ್ಟರ್‌ನಲ್ಲಿ ಯೋಧರಿಗೆ ಅನುಮಾನಾಸ್ಪದವಾಗಿ ಏನೋ ಹಾರಾಟ ನಡೆಸುತ್ತಿದ್ದ ಶಬ್ದ ಕೇಳಿಸಿದೆ. ಬಳಿಕ ಪಾಕಿಸ್ತಾನ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್ ಅನ್ನು ಕಂಡಿದ್ದಾರೆ. ಕೂಡಲೇ ಎಚ್ಚೆತ್ತ ಪಡೆ ಡ್ರೋನ್ ಅನ್ನು ಹೊಡೆದುರುಳಿಸಿದೆ.

ಡ್ರೋನ್‌ಗೆ ಸಣ್ಣ ಚೀಲವನ್ನು (ಹಸಿರು ಬಣ್ಣ) ಅಳವಡಿಸಲಾಗಿತ್ತು. ಅದರಲ್ಲಿ 4 ಹಳದಿ ಮತ್ತು ಒಂದು ಕಪ್ಪು ಬಣ್ಣದ ಚಿಕ್ಕ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಿಷಿದ್ಧ ಸರಕು ಎಂದು ಶಂಕಿಸಲಾಗಿದೆ ಎಂದು ಬಿಎಸ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.

- Advertisement -

Latest News

error: Content is protected !!