Sunday, June 7, 2026
Homeಅಪರಾಧನಾನು ಗರ್ಭಿಣಿಯಾದ ಬಳಿಕ ನನ್ನ ಗಂಡ ಮನೆಗೆ ಬರುತ್ತಿಲ್ಲ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ನಾನು ಗರ್ಭಿಣಿಯಾದ ಬಳಿಕ ನನ್ನ ಗಂಡ ಮನೆಗೆ ಬರುತ್ತಿಲ್ಲ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

- Advertisement -
- Advertisement -

ತುಮಕೂರು: ನಾನು ಗರ್ಭಿಣಿಯಾದ ಬಳಿಕ ನನ್ನ ಗಂಡ ಮನೆಗೆ ಬರುತ್ತಿಲ್ಲ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ನಡೆದಿದೆ. ಇಲ್ಲಿನ ತೆರೆದ ಕುಪ್ಪೆ ಗ್ರಾಮ ಪಂಚಾಯತ್​ನ ಪಿಡಿಒ ಸುದರ್ಶನ್​ ಅವರು ಮನೆಗೆ ಬರುತ್ತಿಲ್ಲ ಎಂದು ಅವರ ಹೆಂಡತಿಯೇ ದೂರು ನೀಡಿದ್ದಾಳೆ. ತುಮಕೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ನನ್ನನ್ನು ಮದುವೆಯಾಗಿ, ಗರ್ಭಿಣಿ ಆದ ನಂತರ ಸುದರ್ಶನ್​ ಮನೆಗೆ ಬರುತ್ತಿಲ್ಲ ಎಂದು ಟಿ. ನರಸೀಪುರ ತಾಲೂಕಿನ ಮಹಿಳೆ ಕುಣಿಗಲ್ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ.

2011ರಲ್ಲಿ ದೇವರಾಯನದುರ್ಗ ಬೆಟ್ಟದಲ್ಲಿ ನನ್ನ ವಿವಾಹವಾಗಿತ್ತು. 2016ರಲ್ಲಿ ಸಬ್ ರಿಜಿಸ್ಟ್‌ಆರ್ ಕಚೇರಿಯಲ್ಲಿ ಮದುವೆಯಾಗಿರುವ ವಿಷಯ ಸುದರ್ಶನ್​ ಕುಟುಂಬಕ್ಕೆ ತಿಳಿಯಿತು. ಇದಕ್ಕೆ ಗಂಡನ ತಾಯಿ ಮತ್ತು ಸಹೋದರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತಿ ಹತ್ತು ದಿನಗಳಿಂದ ಮನೆಗೆ ಬಾರದೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಗರ್ಭಿಣಿಯಾದಾಗಿನಿಂದಲೂ ಮಗು ಬೇಡವೆಂದು ಗಲಾಟೆ ಮಾಡಿ​ ಹಲ್ಲೆ ಮಾಡುತ್ತಿದ್ದ ಎಂದು ಮಹಿಳೆ ಸುದರ್ಶನ್​, ಅತ್ತೆ, ನಾದಿನಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

- Advertisement -

Latest News

error: Content is protected !!