Friday, May 3, 2024
Homeತಾಜಾ ಸುದ್ದಿಕಚ್ಚಾ ಬಾದಾಮ್ ಹಾಡು ಹಾಡಿದಾತನಿಗೆ ಸಿಕ್ಕ ಹಣವೆಷ್ಟು?

ಕಚ್ಚಾ ಬಾದಾಮ್ ಹಾಡು ಹಾಡಿದಾತನಿಗೆ ಸಿಕ್ಕ ಹಣವೆಷ್ಟು?

spot_img
- Advertisement -
- Advertisement -

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿರುವ ಕಚ್ಚಾ ಬಾದಾಮ್ ಹಾಡನ್ನು ಬಹುತೇಕರು ಕೇಳಿ ಇರ್ತಾರೆ. ಕಡ್ಲೆ ಕಾಯಿ ವ್ಯಾಪಾರಿಯೊಬ್ಬ ಶೇಂಗಾ ವ್ಯಾಪಾರಕ್ಕಾಗಿ ಹಾಡುತ್ತಿದ್ದರು. ಈ ಹಾಡು ಇಷ್ಟರಮಟ್ಟಿಗೆ ಹಿಟ್ ಆಗುತ್ತೆ ಅಂತಾ ಯಾರು ಕೂಡ ಊಹಿಸಿರಲ್ಲ.

ಈ ಹಾಡಿನ ಮೂಲಕ ಪಶ್ಚಿಮ ಬಂಗಾಳದ ಬಿರ್​ಭಮ್​ ನಿವಾಸಿ ಶೇಂಗಾ ವ್ಯಾಪಾರಿ ಭುಬನ್​ ಬದ್ಯಕರ್​ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಇನ್ನು ಬದ್ಯಕರ್​ ತನ್ನ ಹಾಡಿಗಾಗಿ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿಯಿಂದ 3 ಲಕ್ಷ ರೂಪಾಯಿ ಪಡೆದಿದ್ದಾರೆ. ಕಚ್ಚಾ ಬಾದಾಮ್​ ಒರಿಜಿನಲ್​ ಸಾಂಗ್​ ಅನ್ನು ರೀಮಿಕ್ಸ್​ ಮಾಡಲು ಸಂಭಾವನೆಯಾಗಿ ಹಾಡಿನ ಸೃಷ್ಟಿಕರ್ತ ಬದ್ಯಕರ್​ಗೆ ಗೌರವ ಧನವಾಗಿ 3 ಲಕ್ಷ ರೂ. ನೀಡಲಾಗಿದೆ.

ಈ ಸಾಂಗ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದಾಗ ಭುಬನ್​ ಬದ್ಯಕರ್​ಗೆ ಹಣ ಸಿಕ್ಕಿರಬಹುದಾ ಅಥವಾ ದುರ್ಬಳಕೆ ಮಾಡಿಕೊಂಡಿರಬಹುದಾ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಾಡಿನ ಮೂಲ ಸೃಷ್ಟಿಕರ್ತ ಎಂಬ ಗೌರವ ಬದ್ಯಕರ್​ಗೆ ಸಿಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿ ಹೆಡ್​ ಗೋಪಾಲ್​ ಘೋಷ್​, ನಾವು ಭುಬನ್​ ಜತೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದೆವು ಮತ್ತು ಅದರಲ್ಲಿ ಅರ್ಧದಷ್ಟು ಮೊತ್ತ ಅಂದರೆ 1.5 ಲಕ್ಷದ ಹಣದ ಚೆಕ್​ ಅನ್ನು ನೀಡಿದ್ದೇವೆ. ಮುಂದಿನ ವಾರದಲ್ಲಿ ಉಳಿದ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!