Monday, June 8, 2026
Homeಕರಾವಳಿಉಡುಪಿಉಡುಪಿ: ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ: ರಘುಪತಿ ಭಟ್

ಉಡುಪಿ: ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ: ರಘುಪತಿ ಭಟ್

- Advertisement -
- Advertisement -

ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನಲ್ಲಿ ಯಾವುದೇ‌ ಅಭಿಪ್ರಾಯ ಕೇಳಿಲ್ಲ ಆದರೆ ಪಕ್ಷಕ್ಕೆ ಬಂದಲ್ಲಿ ಸ್ವಾಗತ ಮಾಡುತ್ತೇವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಬಂದಲ್ಲಿ ನಮ್ಮ ಕ್ಷೇತ್ರದಲ್ಲಿ ಮತ್ತೊಂದು ಬಲ ಬರುತ್ತದೆ. ಈ ಹಿಂದೆ ನಾನು ವಿರೋಧಿಸಿದ್ದೆ ಏಕೆಂದರೆ ಆಗ ಚುನಾವಣೆ‌ ಇತ್ತು. ಈಗ ನನಗೆ ಯಾವ ಭಯ ಕೂಡಾ ಇಲ್ಲ. ಅವರು ಸಿಕ್ಕಿದ್ದಾಗ ಮಾತುಕತೆ ನಡೆಸುತ್ತೇನೆ. ನಮ್ಮ ಪಕ್ಷ ಗಟ್ಟಿಯಾದರೆ ಸಂತೋಷವೇ. ಪಕ್ಷ ಹೇಳಿದ ಹಾಗೆ ನಾನು ಕೇಳುತ್ತೇನೆ ಎಂದರು.

ಇನ್ನು ಈ ಹಿಂದೆ ನಮ್ಮ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ನೀಡಿದಾಗ ಕೂಡಾ ನಾನು ಕೆಲಸ ಮಾಡಿದ್ದೇನೆ. ಈಗ ಗೇಟ್ ಒಪನ್ ಇದೆ. ಹಿಂದೆ ಕೂಡಾ ಗೇಟ್ ಬಂದ್ ಮಾಡಿಲ್ಲ. ಬಂದರೆ ಬರಲಿ ಎರಡು ಮೂರು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಲಿ ಎಂಬುವುದು ನಮ್ಮ ಅಭಿಪ್ರಾಯ ಆಗಿತ್ತು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!