Thursday, June 25, 2026
Homeತಾಜಾ ಸುದ್ದಿಹಿಜಾಬ್, ಕೇಸರಿ ಶಾಲು ವಿವಾದದ ಮಧ್ಯೆ ಸಿಂಧೂರ ಸಮರ - ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ...

ಹಿಜಾಬ್, ಕೇಸರಿ ಶಾಲು ವಿವಾದದ ಮಧ್ಯೆ ಸಿಂಧೂರ ಸಮರ – ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ ವಿದ್ಯಾರ್ಥಿಗೆ ನೋ ಎಂಟ್ರಿ

- Advertisement -
- Advertisement -

ವಿಜಯಪುರ : ರಾಜ್ಯಾದ್ಯಂತ ಹಿಜಾಬ್, ಕೇಸರಿ ಶಾಲು ಸಂಘರ್ಷ ಮುಂದುವರೆದಿದ್ದು, ಇದೀಗ ಹಣೆಗೆ ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ಇಂಡಿ ಪಟ್ಟಣದ ಸರ್ಕಾರಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ.ಈ ವೇಳೆ ದೈಹಿಕ ಶಿಕ್ಷಕರು ವಿದ್ಯಾರ್ಥಿಯನ್ನು ತಡೆದು ಕುಂಕುಮ ತೆಗೆದು ಕಾಲೇಜಿಗೆ ಬರುವಂತೆ ಹೇಳಿದ್ದಾರೆ.

ಹೀಗಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಯನ್ನು ತರಗತಿಗೆ ಕಳಿಸಿದ್ದಾರೆ.

- Advertisement -

Latest News

error: Content is protected !!