Sunday, June 7, 2026
Homeಕರಾವಳಿಉಡುಪಿಮುಲ್ಕಿ: ಆಟೋ ರಿಕ್ಷಾಕ್ಕೆ ಸರ್ವಿಸ್ ಬಸ್ ಡಿಕ್ಕಿ- ಆಟೋ ಚಾಲಕ ಹಾಗು ಪ್ರಯಾಣಿಕ ಪ್ರಾಣಾಪಾಯದಿಂದ ಪಾರು

ಮುಲ್ಕಿ: ಆಟೋ ರಿಕ್ಷಾಕ್ಕೆ ಸರ್ವಿಸ್ ಬಸ್ ಡಿಕ್ಕಿ- ಆಟೋ ಚಾಲಕ ಹಾಗು ಪ್ರಯಾಣಿಕ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಮುಲ್ಕಿ: ಆಟೋ ರಿಕ್ಷಾಕ್ಕೆ ಸರ್ವಿಸ್ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಸಹಿತ ಪ್ರಯಾಣಿಕ ಪವಾಡಸದೃಶ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿ ನಡೆದಿದೆ.

ಉಡುಪಿ ಜಿಲ್ಲೆ ಹೆಜಮಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಿದ್ದ ಆಟೋಗೆ ಕಾರ್ನಾಡು ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ ಮಂಗಳೂರಿನಿಂದ ಬಂದು ಕಾರ್ನಾಡ್ ಒಳಪೇಟೆಗೆ ತಿರುಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು ಆಟೋದಲ್ಲಿದ್ದ ಚಾಲಕ ಹೆಜಮಾಡಿ ನಿವಾಸಿ ಜಯಕರ್ ಸಹಿತ ಕಟ್ಟಡ ಕಾರ್ಮಿಕ ಅಪಾಯದಿಂದ ಪಾರಾಗಿದ್ದಾರೆ.

ಆಟೋದಲ್ಲಿ ಕಟ್ಟಡದ ಕೆಲಸಕ್ಕೆಂದು ಸಾಗಿಸುತ್ತಿದ್ದ ಪೈಂಟ್ ಹೆದ್ದಾರಿಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಸುರಥಿಕಲ್ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!