Saturday, June 13, 2026
HomeUncategorizedಮಂಗಳೂರು: ಪೂಜೆ ಮಾಡಲೆಂದು ಪುರೋಹಿತರನ್ನು ಮನೆಗೆ ಕರೆಸಿ ಹನಿಟ್ರ‍್ಯಾಪ್; ಲಕ್ಷಾಂತರ ಹಣ ಸುಲಿಗೆ

ಮಂಗಳೂರು: ಪೂಜೆ ಮಾಡಲೆಂದು ಪುರೋಹಿತರನ್ನು ಮನೆಗೆ ಕರೆಸಿ ಹನಿಟ್ರ‍್ಯಾಪ್; ಲಕ್ಷಾಂತರ ಹಣ ಸುಲಿಗೆ

- Advertisement -
- Advertisement -

ಮಂಗಳೂರು: ಕೌಟುಂಬಿಕ ಕಲಹದ ಪರಿಹಾರಕ್ಕೆ ಪೂಜೆ ಮಾಡಿಸುವ ಸಲುವಾಗಿ ದಂಪತಿಗಳು ಪುರೋಹಿತರೋರ್ವರನ್ನು ತಮ್ಮ ಮನೆಗೆ ಕರೆಸಿ ಹನಿಟ್ರ‍್ಯಾಪ್ ಮಾಡಿ ಲಕ್ಷಾಂತರ ಹಣ ಸುಲಿಗೆ ಮಾಡಿರುವ ಪ್ರಕರಣವು ಪದವಿನಂಗಡಿ ಎಂಬಲ್ಲಿ ನಡೆದಿದೆ.


ದಂಪತಿಗಳಾದ ಭವ್ಯ ಹಾಗು ರಾಜು ಈ ಕೃತ್ಯ ಎಸಗಿದ್ದು, ಇವರು ಮನೆಯ ಸಮಸ್ಯೆ ಪರಿಹಾರಕ್ಕೆಂದು ಪೂಜೆ ಮಾಡಿಸುವ ಉದ್ದೇಶದಿಂದ ಚಿಕ್ಕಮಂಗಳೂರು ಮೂಲದ ಪುರೋಹಿತ ಜ್ಯೋತಿಷ್ಯರನ್ನು ತಮ್ಮ ಮನೆಗೆ ಕರೆಸಿ ಅವರ ಖಾಸಗಿ ಕ್ಷಣಗಳ ಚಿತ್ರೀಕರಣ ಮಾಡಿ ಹನಿಟ್ರ‍್ಯಾಪ್ ಡೆಸಿದ್ದಾರೆ, ಅಲ್ಲದೆ ಲ್ಷಾಂತರ ಹಣ ಸುಲಿಗೆ ನಡೆಸಿದ್ದಾರೆ. ಎಂದು ದೂರಲಾಗಿದೆ.


ಅಷ್ಟೇ ಅಲ್ಲದೆ ಪುರೋಹಿತರೊಂದಿಗೆ ಇದ್ದ ಫೋಟೋ ವಿಡಿಯೋವನ್ನು ಇಟ್ಟುಕೊಂಡು, ಜ್ಯೋತಿಷ್ಯರಿಂದ ಸುಮಾರು 35 ರಿಂದ 45 ಲಕ್ಷ ಹಣವನ್ನು ಪಡೆದುಕೊಂಡು, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ.

ಜ್ಯೋತಿಷಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳಾದ ದಂಪತಿಗಳನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!