Friday, May 3, 2024
Homeಅಪರಾಧಮಂಗಳೂರು: ಹಣ ಡಬಲ್ ಮಾಡಿ ಕೊಡುವ ಭರವಸೆ ನೀಡಿ ವಂಚನೆ- ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ...

ಮಂಗಳೂರು: ಹಣ ಡಬಲ್ ಮಾಡಿ ಕೊಡುವ ಭರವಸೆ ನೀಡಿ ವಂಚನೆ- ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಹಣ ಡಬಲ್ ಮಾಡಿ ಕೊಡುವ ಭರವಸೆ ನೀಡಿದ ಟಿಕ್ ಟಾಕ್ ಸ್ಟಾರ್ ಒಬ್ಬರ ವಿಡಿಯೋವನ್ನು ನೋಡಿ ಹಣ ಹೂಡಿಕೆ ಮಾಡಿದ ಯುವಕ ಮೋಸ ಹೋಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ಯುವಕ ದೂರು ನೀಡಿದ್ದಾರೆ.

ಸೋನು ಶ್ರೀನಿವಾಸ ಗೌಡ ಎಂಬ ಟಿಕ್ ಟಾಕ್ ಸ್ಟಾರ್ ಸೋಶಿಯಲ್ ಮೀಡಿಯಾ ಪ್ರೊಮೋಷನ್‌ನಲ್ಲಿ ಟ್ರೇಡರ್ ಸ್ಟೆಲ್ಲಾ ಕುರಿತು ವೀಡಿಯೋ ಮಾಡಿದ್ದು, ಇದನ್ನು ನೋಡಿದ ಮಂಗಳೂರಿನ ಯುವಕನೊಬ್ಬ ಹಣ ಹೂಡಿಕೆ ಮಾಡಿ ಇದೀಗ ಮೋಸ ಹೋಗಿದ್ದಾನೆ.

ತಾನು ಮೋಸ ಹೋಗಿರುವ ಕುರಿತು ಮಾತನಾಡಿದ ಯುವಕ, ಸೋನು ಶ್ರೀನಿವಾಸ ಗೌಡ ಅವರು ಟ್ರೇಡರ್ ಸ್ಟೆಲ್ಲಾ ಎಂಬ ಆಪ್‌ ಕುರಿತಾಗಿ ಮಾಡಿರುವ ವಿಡಿಯೋವನ್ನು ನಂಬಿ ನಾನು 10 ಸಾವಿರ ಹಣ ಕಳುಹಿಸಿದ್ದೇನೆ ಆದರೆ ಇದೀಗ ನನಗೆ ಮೋಸವಾಗಿದ್ದು, ಯಾರೂ ಹಣ ಹೂಡಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!