- Advertisement -
![]()
- Advertisement -
ಕಾಸರಗೋಡು: ಮನೆಯವರು ಮದುವೆಗೆ ಹೋಗಿದ್ದ ವೇಳೆ ನೆರೆಮನೆಯ ಯುವಕ ಮನೆಗೆ ನುಸುಳಿ ಒಂದುವರೆ ಲಕ್ಷ ರೂಪಾಯಿ ಕಳವು ಮಾಡಿದ ಘಟನೆ ಪನ್ನಿಪ್ಪಾರೆ ಎಂಬಲ್ಲಿ ನಡೆದಿದೆ. ಬಂಧಿದ ಆರೋಪಿಯನ್ನು ಮುಹಮ್ಮದ್ ಅನಸ್(18) ಎಂದು ಗುರುತಿಸಲಾಗಿದೆ.
ಪನ್ನಿಪ್ಪಾರೆಯ ಅಬ್ದುಲ್ ರಹ್ಮಾನ್ ಅವರ ಪತ್ನಿ ಮಜ್ಮಾ ಅವರ ಮನೆಯಿಂದ ಒಂದೂವರೆ ಲಕ್ಷ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದರು.
ಮನೆಯವರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ನೆರೆಮನೆಯ ಅನಸ್ ಮನೆಗೆ ನುಸುಳಿ ಹಣ ಕದ್ದಿದ್ದ . ಈ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನೆರೆಮನೆಯ ಅನಸ್ ನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಮೊಬೈಲ್ ಆನ್ ಲೈನ್ ಆಟಕ್ಕೆ ತೊಡಗಿಸಲು ಹಣ ಕಳವು ಮಾಡಿದ್ದಾಗಿ ತಿಳಿಸಿದ್ದಾನೆ. ಕಳವುಗೈದ ಹಣದಲ್ಲಿ 80 ಸಾವಿರ ರೂ. ಆಟಕ್ಕೆ ಬಳಸಿದ್ದಾನೆ ಎಂದು ತಿಳಿದುಬಂದಿದೆ.
- Advertisement -


