Thursday, June 4, 2026
Homeಕರಾವಳಿಪುತ್ತೂರು: ಟಿವಿಎಸ್ ಜ್ಯುಪಿಟರ್ ಸ್ಕೂಟರ್, ಆಟೋ ರಿಕ್ಷಾ ನಡುವೆ ಡಿಕ್ಕಿ !

ಪುತ್ತೂರು: ಟಿವಿಎಸ್ ಜ್ಯುಪಿಟರ್ ಸ್ಕೂಟರ್, ಆಟೋ ರಿಕ್ಷಾ ನಡುವೆ ಡಿಕ್ಕಿ !

- Advertisement -
- Advertisement -

ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರಿನಲ್ಲಿ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಅಪಘಾತದಿಂದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತಂತ್ರವರ್ಗ ಸಹಾಯಕ ಸೇರಿದಂತೆ ಇಬ್ಬರಿಗೆ ಗಾಯವಾಗಿದೆ.

ಮನೆಗೆಂದು ತನ್ನ ಸ್ಕೂಟರ್ ನಲ್ಲಿ ಬರುತ್ತಿದ್ದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ತಂತ್ರಿವರ್ಗದ ಸಹಾಯಕ ಅರ್ಚಕ ಮಧುಸೂಧನ್ ಅವರು ರಾತ್ರಿ ದೈವದ ನೇಮದ ಬಳಿಕ ಸಂಪ್ಯದಿಂದ ನರಿಮೊಗರು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ನಡಿವೆ ನರಿಮೊಗರು ಅರುಣ್ ಕುಮಾರ್ ಪುತ್ತಿಲ ಅವರ ಮನೆಯ ಬಳಿ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ತಂತ್ರವರ್ಗದ ಸಹಾಯಕ ಮಧುಸೂಧನ್ ಮತ್ತು ರಿಕ್ಷಾ ಚಾಲಕ ರಜಾಕ್ ಅವರು ಗಾಯಗೊಂಡಿದ್ದರು. ತಕ್ಷಣ ಅರುಣ್ ಕುಮಾರ್ ಪುತ್ತಿಲ ಅವರು ತನ್ನ ಕಾರಿನಲ್ಲಿ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಂಭೀರ ಗಾಯಗೊಂಡ ಮಧುಸೂಧನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!