Thursday, October 15, 2026
Homeಕರಾವಳಿತುಳು ಚಿತ್ರ 'ಕಾರ್ನಿಕೊದ ಕಲ್ಲುರ್ಟಿ' ದಕ್ಷಿಣ ಕನ್ನಡ, ಉಡುಪಿಯಾದ್ಯಂತ ಬಿಡುಗಡೆ !

ತುಳು ಚಿತ್ರ ‘ಕಾರ್ನಿಕೊದ ಕಲ್ಲುರ್ಟಿ’ ದಕ್ಷಿಣ ಕನ್ನಡ, ಉಡುಪಿಯಾದ್ಯಂತ ಬಿಡುಗಡೆ !

- Advertisement -
- Advertisement -

ಮಂಗಳೂರು: ಮಹೇಂದ್ರ ಕುಮಾರ್ ನಿರ್ದೇಶನದ ‘ಕಾರ್ನಿಕೊದ ಕಲ್ಲುರ್ಟಿ’ ತುಳು ಚಿತ್ರ ಡಿಸೆಂಬರ್ 3 ಶುಕ್ರವಾರ ಭಾರತ್ ಮಾಲ್‌ನಲ್ಲಿ ಬಿಡುಗಡೆಯಾಯಿತು.

ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆ ಸಮಾರಂಭ ಉದ್ಘಾಟಿಸಿದರು. ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಶಾಸಕ ವೇದವ್ಯಾಸ್ ಕಾಮತ್, ನಟ ರಮೇಶ್ ಭಟ್, ಪ್ರಶಾಂತ್, ಶಾಲಿನಿ, ಹಿತೈಷಿ ರಾಜ್ ಗೋಪಾಲ್ ರೈ, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಫೀನಿಕ್ಸ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಕಲ್ಲುರ್ಟಿಯನ್ನು ಆಧರಿಸಿದ ಈ ಚಿತ್ರದ ಕಥೆಯನ್ನು ಮಹೇಂದ್ರಕುಮಾರ್ ಬರೆದಿದ್ದಾರೆ, ಸಂಭಾಷಣೆಯನ್ನು ಗಂಗಾಧರ್ ಕಿರೋಡಿಯನ್ ಮತ್ತು ಛಾಯಾಗ್ರಹಣವನ್ನು ಉಮಾಪತಿ ನಿರ್ವಹಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಗಂಗಾಧರ್ ಕಿರೋಡಿಯನ್ ಬರೆದಿದ್ದಾರೆ ಮತ್ತು ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ.

- Advertisement -

Latest News

error: Content is protected !!