Saturday, June 6, 2026
Homeಕರಾವಳಿಉಡುಪಿಕುಂದಾಪುರ: ಪೊದೆಗಳಲ್ಲಿ ಬಿಟ್ಟು ಹೋದ ವಾರದ ಹಸುಳೆಯ ರಕ್ಷಣೆ !

ಕುಂದಾಪುರ: ಪೊದೆಗಳಲ್ಲಿ ಬಿಟ್ಟು ಹೋದ ವಾರದ ಹಸುಳೆಯ ರಕ್ಷಣೆ !

- Advertisement -
- Advertisement -

ಕುಂದಾಪುರ: ಇಲ್ಲಿನ ಮುಚ್ಚಟ್ಟು ಸೇತುವೆ ಬಳಿ ಪೊದೆಗಳಲ್ಲಿ ವಾರದ ಹಸುಳೆಯನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ.

ಇಲ್ಲಿನ ಹಾಲಿನ ಡೇರಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಪೋಷಕರು ತೊರೆದು ಹೋಗಿದ್ದ ಶಿಶುವನ್ನು ರಕ್ಷಿಸಿದ್ದಾರೆ.

ಇಲ್ಲಿನ ಮುಚ್ಚಟ್ಟು ಸೇತುವೆ ಬಳಿ ಮುಂಜಾನೆ 4.30ರ ಸುಮಾರಿಗೆ ರಸ್ತೆ ಪಕ್ಕದ ಪೊದೆಯಲ್ಲಿ ಶಿಶುವಿನ ಅಳಲು ಮಹಿಳೆ ಗೀತಾ ಅವರಿಗೆ ಕೇಳಿದೆ. ಹೆಣ್ಣು ಶಿಶುವನ್ನು ರಕ್ಷಿಸಿ ಠಾಣೆಗೆ ಕರೆತಂದರು.

ಮಗುವಿನ ಪೋಷಕರು ಉದ್ದೇಶಪೂರ್ವಕವಾಗಿ ಮಗುವನ್ನು ಅಪಾಯಕಾರಿ ಪರಿಸರದಲ್ಲಿ ಎಸೆದಿದ್ದಾರೆ ಎಂದು ಅಮಾಸೆಬೈಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಬ್ಬಣ್ಣ ಬಿ ಪಿ ತಿಳಿಸಿದ್ದಾರೆ.

ಈ ಸಂಬಂಧ ಗೀತಾ ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!