Sunday, June 7, 2026
Homeಅಪರಾಧಉಪ್ಪಿನಂಗಡಿ: ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನ ಹಾಗು ನಗದು ದೋಚಿದ ಕಳ್ಳರು

ಉಪ್ಪಿನಂಗಡಿ: ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನ ಹಾಗು ನಗದು ದೋಚಿದ ಕಳ್ಳರು

- Advertisement -
- Advertisement -

ಉಪ್ಪಿನಂಗಡಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬಾಗಿಲಿನಿಂದ ಕಳ್ಳರು ನುಗ್ಗಿದ ಘಟನೆ ಮನೆಯಲ್ಲಿದ್ದ ನಗೆ ನಗದನ್ನು ದೋಚಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದ ಉರುವಾಲು ಪದವು ಎಂಬಲ್ಲಿ ನಡೆದಿದೆ.

ಉರುವಾಲು ಪದವು ನಿವಾಸಿ ಹಮೀದ್ ಎಂಬವರು ತನ್ನ ಪತ್ನಿ ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದ್ದು, ಕಳ್ಳರು ಮನೆಯೊಳಗಿದ್ದ ಕವಾಟಿನ ಬೀಗ ಮುರಿದು ಚಿನ್ನದ ಸರ, ಎರಡು ಉಂಗುರ ಸೇರಿದಂತೆ ಆರು ಪವನ್ ತೂಕದ ಚಿನ್ನಾಭರಣವನ್ನು ಹಾಗೂ ಸ್ವಲ್ಪ ನಗದು ಹಣವನ್ನು ಕದ್ದೊಯ್ದಿದ್ದಾರೆ.

ಪರಿಸರದಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಭಿಕ್ಷಾಟನೆ ನೆಪದಲ್ಲಿ ಸಂಚರಿಸುತ್ತಿದ್ದ ಅಲೆಮಾರಿ ತಂಡದ ಮೇಲೆ ಸಂಶಯ ಮೂಡಿದ್ದು, ಸದ್ರಿ ತಂಡವನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!