Saturday, June 6, 2026
Homeಇತರನೆಲ್ಯಾಡಿ: ಇಲಿ ಜ್ವರಕ್ಕೆ ಗ್ರಾ. ಪಂ ಸದಸ್ಯ ಬಲಿ...!

ನೆಲ್ಯಾಡಿ: ಇಲಿ ಜ್ವರಕ್ಕೆ ಗ್ರಾ. ಪಂ ಸದಸ್ಯ ಬಲಿ…!

- Advertisement -
- Advertisement -

ನೆಲ್ಯಾಡಿ: ಇಲಿ ಜ್ವರ ಉಲ್ಬಣಗೊಂಡು ಚಿಕಿತ್ಸೆ ಫಲಿಸದೆ ಗೋಳಿತೊಟ್ಟು ಗ್ರಾ.ಪಂ ಸದಸ್ಯ ಡೆಬ್ಬೇಲಿ ನಿವಾಸಿ ಮಹೇಶ್ (27) ರವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಮಹೇಶ್‌ರವರಿಗೆ ಕೆಲ ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ. 26ರಂದು ಸಂಜೆ ಪ್ರತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆತಂದಿದ್ದರು. ಬಳಿಕ ರಾತ್ರಿ ವೇಳೆ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ನ.27ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರು ಇಲಿಜ್ವರದಿಂದ ಮೃತಪಟ್ಟಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.

ಮಹೇಶ್‌ರವರು ಗೋಳಿತೊಟ್ಟು ಸಿದ್ಧಿ ವಿನಾಯಕ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾಗಿದ್ದರು, ನೆಲ್ಯಾಡಿ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಅಲ್ಲದೇ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು ಅವರು ಚಿರಪರಿಚಿತರಾಗಿದ್ದರು, ಮೃತ ಮಹೇಶ್‌ರವರಿಗೆ ವಿವಾಹ ನಿಗದಿಯಾಗಿದ್ದು ಮುಂದಿನ ಜನವರಿಯಲ್ಲಿ ಮದುವೆ ನಡೆಯಲಿತ್ತು.

- Advertisement -

Latest News

error: Content is protected !!