- Advertisement -
- Advertisement -
ಮಂಗಳೂರು: ನವೆಂಬರ್ 13 ರಂದು ಕೋಡಿಕಲ್ ಮತ್ತು ಅಕ್ಟೋಬರ್ 23 ರಂದು ಕುಳೂರಿನಲ್ಲಿ ದುಷ್ಕರ್ಮಿಗಳ ತಂಡ ಆಯುಧಗಳನ್ನು ಬಳಸಿ, ನಾಗ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಕೂಳೂರಿನಲ್ಲಿ ನಡೆದ ನಾಗ ಬನಕ್ಕೆ ಹಾನಿಯ ಕುರಿತು ಪೊಲೀಸರು ಎಂಟು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.
ಸಫ್ವಾನ್ (25), ಸುಹೈಬ್(23), ಪ್ರವೀಣ್ ಅನಿಲ್ (27), ನಿಖಿಲೇಶ್ (22), ಜಯಂತ್ (30), ಪ್ರತೀಕ್ (24) ,ಮಂಜುನಾಥ (30), ನೌಷದ್ ಅರೇಹಳ್ಳಿ (30) ಬಂಧಿತ ಆರೋಪಿಗಳು.
ಇವರು ಕೋಡಿಕಲ್ ನಲ್ಲೂ ನಾಗಬನದ ಹಾನಿ ಮಾಡಿದ ದುಷ್ಕರ್ಮಿಗಳೇ ಎಂಬ ಪ್ರಕರಣದ ಆರೋಪಿಗಳು ಆಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಉಳಿದ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.
- Advertisement -
